ಮೂಡಲಗಿ : ಅನಾರೋಗ್ಯದ ಹಿನ್ನೆಲೆ ಮಹಿಳೆ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ

ಮೂಡಲಗಿ : ಅನಾರೋಗ್ಯದ ಹಿನ್ನೆಲೆ ಮಹಿಳೆ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಮೂಡಲಗಿ ಪಟ್ಟಣದ ವಿದ್ಯಾನಗರ ನಿವಾಸಿ ಬಾಬು ಸೇರಗಾರ ಎಂಬವರ ಪತ್ನಿ ಕಮಲಾಕ್ಷಿ (60) ಎಂಬ ಮಹಿಳೆ ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವುದರಿಂದ ಹಾಗೂ ಉಸಿರಾಡಲು ಭಾರಿ ತೊಂದರೆಯಾಗುತ್ತಿರುವುದರಿಂದ ಮನಸ್ಸಿಗೆ ಹಚ್ಚಿಕೊಂಡು ಶುಕ್ರವಾರ ದಿನಾಂಕ 17-4-2020ರಂದು ರಾತ್ರಿ ವೇಳೆಯಲ್ಲಿ ಮೂಡಲಗಿ ಪಟ್ಟಣದ ಪುರಸಭೆಯ ಮುಂದಿನ ಬಾವಿಯ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share

WhatsApp
Follow by Email