
ಬೈಲಹೊoಗಲ : ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಲಾಕ್‌ಡೌನ್ ನಿಂದ ಕಷ್ಟವನ್ನು ಅನುಭವಿಸುತ್ತಿರುವ ಬಡವರಿಗೆ ಬಳಸಬೇಕೆಂದು ಅಂಬೇಡ್ಕರ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ಅರ್ಜುನ ಬಂಡಿ ಒತ್ತಾಯಿಸಿದರು.
ಬಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಿಖಿತ ಹೇಳಿಕೆ ಬಿಡುಗಡೆ ಮಾಡಿದರು. ಇಡೀ ವಿಶ್ವವನ್ನೇ ತಲ್ಲನ ಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್‌ನಿಂದ ಬಡ ಕೂಲಿ ಕಾರ್ಮಿಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 2 ಕೋಟಿ ರೂ.ಗಳನ್ನು ಮಿಸಲಾಗಿರುತ್ತದೆ. ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಕೂಲಿಕಾರ್ಮಿಕರು ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ ಸರಕಾರ ಬಿಪಿಎಲ್ ಪಡಿತರದಾರರಿಗೆ ಅಕ್ಕಿ, ಗೋಧಿಯನ್ನು ಮಾತ್ರ ವಿತರಿಸಲಾಗುತ್ತಿದೆ. ಜನರಿಗೆ ಸರಿಯಾಗಿ ಕೆಲಸವಿಲ್ಲದೆ ದಿನ ನಿತ್ಯ ದುಡಿಯುವ ಕೂಲಿ ಕಾರ್ಮಿಕರ ಕುಟುಂಬಗಳು ಊಟದ ಇತರೆ ದಿನಸಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ ಲಾಕ್‌ಡೌನ ನಿಂದಾ ದಿನಕೂಲಿ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಬಿ.ಪಿ.ಎಲ್. ಬಡ ಕುಟುಂಬಗಳಿಗೆ 2000 ರಿಂದ 2500 ರೂ ಗಳ (ಎಣ್ಣೆ , ಹಿಟ್ಟು, ಕಾರ, ಸಕ್ಕರೆ ಇತರೆ ವಸ್ತುಗಳನ್ನು) ಸೇರಿದಂತೆÀ ಆಹಾರದ ಕೀಟ್ ವಿತರಿಸಿದರೆ ಒಂದು ಕ್ಷೇತ್ರ ವ್ಯಾಪ್ತಿಯ ಎಲ್ಲ ಅರ್ಹ ಕುಟುಂಬಗಳು ನೆಮ್ಮದಿಯಾಗಿ ಜೀವನ ನಡೆಸಬಹುದಾಗಿದೆ. ಈ ಕಾರ್ಯದಲ್ಲಿ ಎಲ್ಲ ಶಾಸಕರು ಮಾನವೀಯತೆ ಮೆರೆಯುವುದರ ಜೊತೆಗೆ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಬೆಳಕಾಗಬೇಕೆಂದು ವಿನಂತಿಸಿದರು