
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಮೂವತ್ತೊಂದು ಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ಪಡಿತರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹುಕ್ಕೇರಿ ಪಟ್ಟಣದ ವಿಜಯ ರವದಿ, ಮತ್ತು ಸಂಕೇಶ್ವರದ ಕಿರಣ ಕಾಂಬಳೆ ಇವರು ಅರುಣ ಸೆನೆಟರಿ ಸಪ್ಲೈರ್ಸ ಮೂಲಕ ಸರ್ಕಾರಿ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ದಿನಸಿ ವಸ್ತುಗಳ ಕಿಟ್ ಪೂರೈಕೆ ಮಾಡಿದರು.
ಈ ವೇಳೆ ಮಾತನಾಡಿದ ವಿಜಯ ರವದಿ
ಕೊರೋನಾ ಲಾಕ್ ಡೌನ ಹಿನ್ನೆಲೆಯಲ್ಲಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂವತ್ತಕ್ಕು ಹೆಚ್ಚು ಗುತ್ತಿಗೆ ಕಾರ್ಮಿಕರು ಕಡಿಮೆ ಸಂಬಳ ಮತ್ತು ಹಲವು ಸಂಕಷ್ಟಗಳ ನಡುವೆಯೂ ಉತ್ತಮ ಸೇವೆ ನೀಡುತ್ತ ಕೊರೋನಾ ವಾರಿಯರ್ಸ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ನೈತಿಕ ಧೈರ್ಯ ತುಂಬಲು ಮತ್ತು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಲು ಇಂದು ದಿನಸಿ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಿ ಅವರನ್ನು ಪ್ರೋತ್ಸಾಹಿಸಿದ್ದೇವೆ ಎಂದು ಹೇಳಿದರು
ಈ ವೇಳೆ ಸರ್ಕಾರಿ ಆಸ್ಪತ್ರೆ ತಾಲ್ಲೂಕು ವೈದ್ಯಾಧಿಕಾರಿ ಮುತ್ತನ್ನ ಕೊಪ್ಪದ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಿ ಎಸ್ ಪಾಟೀಲ, ಆರೋಗ್ಯ ಅಧೀಕಾರಿಗಳಾದ ಬಿ ಎ ನೇಮಗೌಡ,ಪಿ ಎಮ್ ನರಟ್ಟಿ,ನವೀನ ಕಾತ್ರಾಳ, ಶ್ರೀಮತಿ ಎಮ್ ಎಸ್ ಬಟಗಿ, ಮತ್ತು ಮುರಗೇಶ ಇಂಗಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.