ದಿನಗೂಲಿ ನೌಕರರಿಗೆ, ತಾಲೂಕಾ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯ ಕರ್ತೇಯರಿಗೆ ದಿನಸಿ ಆಹಾರ ಸಾಮಗ್ರಿಗಳ ಕಿಟ್ಟ್ ವಿತರಣೆ

ಮುದ್ದೇಬಿಹಾಳ:ತಮ್ಮ ಹಾಗೂ ತಮ್ಮ ಕುಟುಂಭದವರ ಜೀವನವನ್ನು ಲೆಕ್ಕಿಸದೇ ಲಕ್ಷಾಂತರ ಜನರನ್ನು ಕೊರೊನಾ ವೈರಸ್ ಹರಡದಂತೆ ಪ್ರತಿ ಮನೆ ಮನೆಗೆ ತೆರಳಿ ಸೈನಿಕರಂತೆ ಜವಾಬ್ದಾರಿಯುತವಾಗಿ ಕೋರೋನಾ ವೈರಸ್ ಬಗ್ಗೆ ಜಾಗೃತಿ ಅರಿವೂ ಮೂಡಿಸುವ ಆಶಾ ಕಾರ್ಯಕರ್ತೆಯರಿಗೆ, ತಾಲೂಕಾ ಆರೋಗ್ಯ ಇಲಾಖೆ ಎಲ್ಲ ಅಧಿಕಾರಿಗಳಿಗೆ ಸಿರಬಾಗಿ ಕೈಮುಗಿದು ಅಭಿನಂದನೆಗಳನ್ನು ಸಲ್ಲಿಸಲಾಗುವುದು ಅಂತಹವರೆ ಮೇಲೆ ಉಗುಳುವುದು ಮತ್ತು ಅವರ ಮೇಲೇ ಹಲ್ಯೆ ನಡೆಸುತ್ತಿರುವವgರು ಯಾರೇ ಆಗಿರಲಿ ಅಂತಹವರನು ಯಾವೂದೇ ಮುಲಾಜು ಇಲ್ಲದೇ ಒದ್ದು ಜೈಲಿಗೆ ಕಳಿಸುಂತಾಗಬೇಕು ಜೊತೆಗೆ ಅವರಿಗೆ ನ್ಯಾಯಾಲಯ ಜಾಮೀನು ನೀಡದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೆಳಿದರು.
ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ಪಟ್ಟಣದ ಪುರಸಭೆ ದಿನಗೂಲಿ ನೌಕರರಿಗೆ, ತಾಲೂಕಾ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯ ಕರ್ತೇಯರು ಸೇರಿದಂತೆ ನೇತಾಜಿ ನಗರ, ಕುಂಬಾರ ಓಣಿ, ಆಶ್ರಯ ಕಾಲೋನಿ, ಬನಶಂಕರಿ ನಗರ, ಸಂಗಮೇಶ ನಗರ, ವಿವಿಧ ಬಡಾವಣೆಗಳಲ್ಲಿನ ಜನರಿಗೆ ಉಚಿತ ದಿನಸಿ ಆಹಾರ ಸಾಮಗ್ರಿಗಳ ಕಿಟ್ಟ್ ನ್ನು ತಮ್ಮ ಧರ್ಮ ಪತ್ನಿ ಮಹಾದೇವಿಯವರೊಂದಿಗೆ ಜೊತೆಗೂಡಿ ವಿತರಿಸಿ ಅವರು ಮಾತನಾಡಿದರು.
ದೇಶದೆಲ್ಲಡೆ ಕೋರೋನಾ ವೈರಾಣು ಸಧ್ಯ ವಿಜಯಪುರ ಜಿಲ್ಲೇಯಲ್ಲಿ 35 ಜನರಿಗೆ ಸೊಂಕು ತಗಲುವ ಮೂಲಕ ತನ್ನ ಅಟ್ಟಹಾಸ ಮೆರೆಯುತ್ತಿದೆ.ಒಂದು ಕಡೆಯಾದರೇ ಇನ್ನೋಂದು ಕಡೆ ಲಾಕ್ ಡೌನ ಸರಕಾರದ ಆದೇಶದಂತೆ ಉದ್ಯೋಗಸ್ಥರು ನಿರುದ್ಯೋಗಿಗಳಾಗಿ ಮನೆಯಲ್ಲಿಯೇ ಕುಳಿತ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ ಇಂತಹ ಸಂದರ್ಭದಲ್ಲಿ ಶಾಸಕನಾಗಿ ತಾಲೂಕಿನ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನನ್ನ ಜವಾಬ್ದಾರಿಯಾಗಿದೆ.
ಅಲ್ಲದೇ ದಾಸೋಹದಿಂದಲೇ ಇಂದು ಜನರ ಆಶಿರ್ವಾದದಿಂದ ಬೆಳೆದು ಬಂದವವನು ನಾನೂ ಕೂಡ ಬಡಕುಟುಂಭದಿAದ ಬಂದಿದ್ದೇನೆ ಬಡವರ ಕಷ್ಟಗಳೇನು ಎಂಬುದನ್ನು ಅರ್ಥೈಸಿಕೊಂಡಿದ್ದೇನೆ ಹಾಗಾಗಿ ನನ್ನ ಮತಕ್ಷೇತ್ರ ಯಾವೊಬ್ಬ ಸಾಮಾನ್ಯ ಕುಟುಂಭದ ವ್ಯಕ್ತಿ ಉಪವಾಸದಿಂದ ನರಳುವಂತಾಗಬಾರದು ಎಂಬು ಉದ್ದೇಶದಿಂದ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸುಮಾರು 1 ಕೋಟಿ ವೆಚ್ಚ ದಲ್ಲಿ ಸುಮಾರು 20 ಸಾವಿರ ಕುಟುಂಭಗಳಿಗೆ ಅಗತ್ಯ ದಿನಸಿ ಆಹಾರ ಸಾಮಗ್ರಿ ಕಿಟ್ಟ ಹಾಗೂ ಉಳ್ಳಾಗಡ್ಡಿ, ಬೋಟೆಟೋ(ಆಲುಗಡ್ಡಟೆ), ಸೇರಿದಂತೆ ಇತರೇ ತರಕಾರಿಯನ್ನು ಉಚಿತವಾಗಿ ನೀಡುತ್ತಿದ್ದೇನೆ ಇದು ಕೇವಲ ಒಂದು ದಿನಕ್ಕೆ ಮುಕ್ತಾಯವಲ್ಲ ಎಲ್ಲಯವರೆU ಕೊರೊನಾ ಮುಕ್ತಿಯಾಗಿ ಲಾಕ್ ಡೌನ ಸಡಲಿಕೆ ಯಾಗುವುದಿಲ್ಲವೋ ಅಲ್ಲಿಯವರೆಗೆ ಪ್ರತಿ ತಿಂಗಳಿಗೊಮ್ಮೇ ಈ ರೀತಿ ದಿನಸಿ ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಗುತ್ತದೆ ಎಂದರು.
ಈ ವೇಳೆ ಪಟ್ಟಣದ ಒಳಚರಂಡಿ ಕಾಮಗಾರಿಗೆಂದು ಪಟ್ಟಣಕ್ಕೆ ಬಂದಿರುವ ಆಂದ್ರ ಮೂಲದ ಕೂಲಿಕಾರ್ಮಿಕರ ಸುಮಾರು 20 ಕುಟುಂಭಗಳಿಗೆ ಮಕ್ಕಳಿಗೆ ಒಂದು ಪಾಕೇಟ್ ಅಕ್ಕಿ, ದಿನಸಿ ಆಹಾರ ಧಾನ್ಯ ಕಿಟ್ಟ್ ನೀಡುವ ಮೂಲಕ ಮಾನವಿಯತೆ ಮರೆದರು.
ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಧರ್ಮಪತ್ನಿ ಸಮಾಜ ಸೇವಕಿ ಮಹಾದೇವಿ ಎಸ್ ಪಾಟೀಲ(ನಡಹಳ್ಳಿ) ತಹಶಿಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ತಾಲೂಕಾ ವೈದ್ಯಾಧಿಕಾರಿ ಡಾ, ಸತೀಶ ತಿವಾರಿ, ಆರೋಗ್ಯ ಸಹಾಯಕ ಎಂ ಎಸ್ ಗೌಡರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಸೇರಿದಂತೆ ಮತ್ತಿತರರು ಇದ್ದರು
Share
WhatsApp
Follow by Email