
ತಾಲೂಕಿನ ಬಾಳಸಂದ್ರ ಗ್ರಾಮದ ಯಲ್ಲಪ್ಪ ಮತ್ತು ಕುನಿಬಂಡೆ ಗ್ರಾಮದ ಎನ್.ಮಂಜುನಾಥ್ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಕಳ್ಳಬಟ್ಟಿಯನ್ನು ತಂದು ತಾಲ್ಲೂಕಿನಲ್ಲಿ ಮಾರಟ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಆರೋಪಿಗಳು ಅಕ್ರಮವಾಗಿ ಕಳ್ಳಬಟ್ಟಿಯನ್ನು ಮಾರಾಟ ಮಾಡುವ ವಿಚಾರ ಖಚಿತವಾಗಿ ತಿಳಿದುಕೊಂಡ ಅಧಿಕಾರಿಗಳು ದಾಳಿ ಮಾಡಿದಾಗ ಕುನಿಬಂಡೆ ಆರೋಪಿಯ ದ್ವಿಚಕ್ರ ವಾಹನದಲ್ಲಿ 7.74 ಲೀಟರ್ ಮತ್ತು ಬಾಳಸಂದ್ರ ಗ್ರಾಮದ ಆರೋಪಿಯ ದ್ವಿಚಕ್ರವಾಹನದಲ್ಲಿ 10.80 ಲೀಟರ್ ಕಳ್ಳಬಟ್ಟಿ ಸಾರಾಯಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದರು.
ಅಬಕಾರಿ ಉಪಆಯುಕ್ತರಾದ ಕೆಕೆ ಸುಮಿತ, ಉಪ ಅಧೀಕ್ಷಕ ಕೆ.ಜೆ ಸಂದೀಪ್ ಮಾರ್ಗದರ್ಶನದಲ್ಲಿ , ಅಬಕಾರಿ ನಿರೀಕ್ಷಕ ಎಸ್.ಎನ್ ಚಿರಂಜೀವಿ ಅಬಕಾರಿ ಉಪ ನಿರೀಕ್ಷಕ ರೋಹಿತ್, ಮುನಿಸ್ವಾಮಿ, ವಿಜಯ್ ಕುಮಾರ್, ದಾದಾಪೀರ್, ವಿಜಯ್ ಮುಂತಾದವರು ದಾಳಿಯಲ್ಲಿ ಭಾಗವಹಿಸಿ ಆರೋಪಿಗಳಿಂದ ಅಕ್ರಮಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.