ಮನೆಯಲ್ಲಿಯೇ ಬಸವ ಜಯಂತಿ ಆಚರಿಸಿ : ರತ್ನಪ್ರಭಾ ಬೆಲ್ಲದ

ಬೆಳಗಾವಿ : ಈ ಬಾರಿಯ ಬಸವ ಜಯಂತಿ ಆಚರಣೆಯನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಸರಳ ರೀತಿಯಿಂದ ಆಚರಿಸುವಂತೆ ಬೆಳಗಾವಿ ಜಿಲ್ಲಾ ವೀರಶೈವ ಮಹಾಸಭೆಯ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಮನವಿ ಮಾಡಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು ಈ ಬಾರಿಯ ಬಸವ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಬೇಕು ಎಂದು ನಿರ್ಧರಿಸಲಾಗಿತ್ತು .
ಅದೇ ರೀತಿಯಲ್ಲಿ ತಯಾರಿಯನ್ನು ನಡೆಸಲಾಗಿತ್ತು .ಆದರೆ ಕೋರೋನಾ ವೈರಸ್ ಬಮಹಾಮಾರಿಯಿಂದಾಗಿ ಸಾರ್ವಜನಿಕವಾಗಿ ಅದ್ಧೂರಿಯಿಂದ ಬಸವ ಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ .
ವೈರಸ್ ಹಬ್ಬದಂತೆ ತಡೆಯುವ ಸಲುವಾಗಿ ಸರ್ಕಾರ ರೂಪಿಸಿರುವ ಎಲ್ಲ ನಿಯಮಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿ ಇರುವ ಹಿನ್ನೆಲೆಯಲ್ಲಿ ಎಲ್ಲರೂ ನಮ್ಮ ನಮ್ಮ ಮನೆಗಳಲ್ಲಿಯೇ ಬಸವ ಜಯಂತಿಯನ್ನು ಆಚರಿಸೋಣ ನಮ್ಮ ನಮ್ಮ ಕುಟುಂಬದವರೊಂದಿಗೆ ವಚನ ಪಠಣ ಮಾಡುತ್ತಾ ಆಚರಿಸೋಣ ಎಂದವರು ಹೇಳಿದ್ದಾರೆ .
Share
WhatsApp
Follow by Email