ಬ್ರೇಕಿಂಗ್ ನ್ಯೂಸ್ ರಾಜ್ಯದಲ್ಲಿ ಕಾನೂನು ಹದಗೆಡಿಸುವವರ ವಿರುದ್ದ ಕಠಿಣ ಕ್ರಮ: ಸಚಿವ ಬೊಮ್ಮಾಯಿ 23/04/202023/04/2020 admin ಸಕಲೇಶಪುರ: ರಾಜ್ಯದಲ್ಲಿ ಕಾನೂನು ಹದಗೆಡಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.ಉಡುಪಿ ಜಿಲ್ಲೆಗೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ಸಕಲೇಶಪುರದ ಪ್ರವಾಸಿ ಮಂದಿರದಲ್ಲಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ವಿನಾಕಾರಣ ಶಾಂತಿ ಕದಡುವರು ಹಾಗೂ ಕೋರೋನ ವಾರಿಯರ್ಸ್ ಗಳ ಹಲ್ಲೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಮೀರ್ ಅಹಮ್ಮದ್ ರವರನ್ನು ಕ್ವಾರಂಟೈನ್ ನಲ್ಲಿ ಇಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಈಗಾಗಲೇ ಆರೋಗ್ಯ ಸಚಿವ ಶ್ರೀ ರಾಮುಲುರವರು ಇಲಾಖೆ ವತಿಯಿಂದ ವರದಿ ತರಿಸಿಕೊಂಡಿದ್ದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಕೊರತೆಯಾಗಿಲ್ಲ , ಹಾಸನ ಜಿಲ್ಲೆ ಹಸಿರುವಲಯದಲದಲ್ಲಿದ್ದು ಯಾವುದೆ ಅಪಾಯವಾಗದಿರಲೆಂದು ಮೇ3ರವರೆಗೆ ಯಥಾ ಸ್ಥಿತಿಯಲ್ಲಿ ಮುಂದುವರೆಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.ಕೋರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಪಕ್ಷಗಳ ಸಭೆಯನ್ನು ಈಗಾಗಲೇ ನೆಡೆಸಿದ್ದು ಸಹಕಾರ ನೀಡುವಂತೆ ಕೇಳಲಾಗಿದೆ. ಆದರೂ ಸಹಕಾರ ನೀಡದೆ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಹಾಸನ ಜಿಲ್ಲೆಯು ಗ್ರೀನ್ ಝುನ್ ನಲ್ಲಿದೆ ಆದರೂ ಮುಂದಿನ 15 ದಿನಗಳ ವರೆಗೂ ಎಚ್ಚರಿಕೆಯಿಂದ ಇರಬೇಕಾಗಿರುವುದು ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. Share