
ಅವರು ರವಿವಾರ ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಿಂದ ಕೊಡಲ್ಪಟ್ಟ ದಿನಸಿ ದಿನಬಳಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ವೈರಸ್ದಿಂದಾಗಿ ಪ್ರಪಂಚದ ತುಂಬ ಜನರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಆಹಾರದ ಸಮಸ್ಯೆಯಾಗಬಾರದೆಂದು ಬಾಲಚಂದ್ರ ಜಾರಕಿಹೊಳಿಯವರು ಪ್ರತಿ ಕುಟುಂಬಕ್ಕೂ ದಿನಸಿ ದಿನ ಬಳಕೆ ವಸ್ತು ನೀಡುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿ ನಿಯಮಾವಳಿಗಳನ್ನು ಪಾಲಿಸುವದರ ಮೂಲಕ ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಹಾಯ ಸಹಕಾರ ನೀಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಪಿಎಲ್ಡಿ ಬ್ಯಾಂಕ ನಿರ್ಧೇಶಕ ಅಡಿವೆಪ್ಪ ಅಳಗೋಡಿ, ಡಿ.ಡಿ ದೇಸಾಯಿ, ಆರ್ ಎಸ್ ಗುತ್ತಿಗೂಳಿ, ಲಕ್ಷ್ಮಣ ಸಂಕ್ರಿ, ಕೃಷ್ಣಾ ಮಳಲಿ, ಹನಮಂತ ಮಾವಿನಗಿಡದ, ಬಾಳಪ್ಪ ದಳವಾಯಿ, ಗೋಪಾಲ ಹರಿಜನ, ಲಕ್ಷ್ಮಣ ಚನ್ನಾಳ, ಬಿ.ಎಸ್ ಅಳಗೋಡಿ, ಮಲ್ಲಯ್ಯ ಹಿರೇಮಠ, ಗ್ರಾ.ಪಂ ಉಪಾಧ್ಯಕ್ಷ ವೆಂಕಟ ಮಹಾರಡ್ಡಿ, ಸದಸ್ಯರಾದ ಫಕೀರವ್ವ ಅಳಗೋಡಿ, ಕರೆಪ್ಪ ಅಳಗೋಡಿ, ಎನ್ಎಸ್ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಮಳಲಿ, ಲಕ್ಷ್ಮೀಬಾಯಿ ಸರವನ್ನವರ, ಆಶಾ ಕಾರ್ಯಕರ್ತೆ ಸುಮಿತ್ರಾ ಹರಿಜನ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ:ಕೆ.ವಾಯ್ ಮೀಶಿ