ಭಕ್ತಿ ಭಂಡಾರಿ, ಕ್ರಾಂತಿಯೋಗಿ ಬಸವಣ್ಣ | ವಿಶ್ವದಾದ್ಯಂತ ಬಸವ ಜಯಂತಿ ಸರಳ ರೀತಿಯಲ್ಲಿ ಆಚರಣೆ

ವಿಷೇಶ ವರದಿ : ಮಲ್ಲು ಬೋಳನ್ನವರ
ಹಳ್ಳೂರ :
ವಿಭೂತಿಯ ಹೊಸದವರ
ರುದ್ರಾಕ್ಷಿಯ ಧರಿರಿಸದವರು
ನಿತ್ಯ ಲಿಂಗಾರ್ಚನೆಯ ಮಾಡದವರ
ಸದ್ಬಕ್ತರ ಸಂಗದಲ್ಲಿದವರ ಎನಗೊಮ್ಮೆ ತೋರದರರು
ಕೂಡಲ ಸಂಗಮದೇವಾ ಸೆರಗೊಡ್ಡಿ ಬೇಡುವೆನು……….

ಪ್ರತಿ ವರ್ಷದಂತೆ ಮತ್ತೇ ಸಬವ ಜಯಂತಿ ಬಂದಿದೆ, ಕನ್ನಡಿಗರಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ಬಸವ ಕಲ್ಯಾಣ ಸದ್ದು ಮಾಡಬೇಕಾಗಿತ್ತು ಆದರೆ ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಪರಿಣಾಮವಾಗಿ ವಿಜೃಂಭಣೆಯಿಂದ ನಡೆಯಬೇಕಿದ ಬಸವ ಜಯಂತಿ ಲಾಕ್ ಡೌನ್ ಮೂಲಕ ಲಾಕ್ ಆಗಿದೆ.

ಇಂದು ಬಸವ ಪ್ರೇಮಿಗಳಿಗೆ ಸ್ವಲ್ಪ ಮಟ್ಟಿಗೆ ಅಸಮಾಧಾನ ಮೂಡಿದೆ, ಕಾರಣ ಏನೂ ಗೊತ್ತಾ ಮಳೆಗಾಲದಂತೆ, ಚಳಿಗಾಲದಂತೆ, ದೀಪಾವಳಿಯಂತೆ, ಸಂಕ್ರಾಂತಿಯಂತೆ ಬಸವ ಜಯಂತ್ಯೂತ್ಸವವೂ ಕೂಡಾ ಪ್ರತಿ ವರ್ಷ ಬರುತ್ತದೆ. ಬಸವ ಪ್ರೇಮೀಗರ ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸುತ್ತದೆ ಆದರೆ ಇಂದು ಮಾತ್ರ ಆ ಸಂಚಲನಕ್ಕೆ ಕಡಿವಾಣ ಬಿದ್ದಿದೆ.

ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು, ಇಂಗಳೇಶ್ವರ ಬಾಗೇವಾಡಿಯಲ್ಲಿ ಶ್ಐವ ಬ್ರಾಹ್ಮಣ ದಂಪತಿಳಾದ ಮಾದರದ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖ ಮಾಸದ ಅಕ್ಷಯ ತ್ರುತೀಯಯದಂದು ಕ್ರಿ.ಶ.1134 ಏಪ್ರಿಲ್ 20ರ ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಬಸವಣ್ಣ.

ದೇವರು ಬೇರೆ ಎಲ್ಲಿಯೂ ಇಲ್ಲ ಻ವನು ನಮ್ಮೊಳಗೆ ಇದ್ದಾನೆ ಎಂಬ ಬಸವಣ್ಣ ನಂಬಿದ್ದರು. ಸುಳ್ಳು ಹೇಳುವರು, ಕೊಲೆ ಸುಲಿಗೆ, ಪ್ರಾಣಿ ಬಲಿ, ಹಿಂಸೆ ಬಸವಣ್ಣನವರಿಗೆ ಯಾವುದು ಇಷ್ಟವಾಗುತ್ತೊರಲಿಲ್ಲ. ಬಸವಣ್ಣನವರಿಗೆ ಕ್ರಾಂತಿಯೋಗಿ ಬಸವಣ್ಣ, ಮಹಾಮಾನತಾವಾದಿ ಎಂಬ ಹೆಸರುಗಳೂ ಕೂಡಿವೆ. ಸಮಾನತೆ, ಕಾಯಕ, ತತ್ವಗಳನ್ನು ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವರಣರಾಗಬುದು ಅನ್ನೋದು ಬಸವಣ್ನನವರ ದೃಷ್ಟಿಕೋನವಾಗಿತ್ತು.

ಇಂತಹ ಮಾಹಾನ್ ನೇತರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕ ಹಾಗೂ ಧರ್ಮಪಿತರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು, ಬಸವಣ್ನನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ, ಕಾಯಕ, ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾದ ನಂಬಿಕ್ಕೆಯಾಗಬೇಕು ಎಂಬುವುದು ಬಸವಣ್ಣನವರ ಮಾತು.

ಈ ವರ್ಷ ದೇಶದಾದ್ಯಂತ ಸರಳ ರೀತಿಯಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗಿದೆ. ಕೊರೋನಾ ವೈರಸ್ ಹಿನ್ನೆಲೆ ಎಲ್ಲೂ ತಮ್ಮ ತಮ್ಮ ಮನೆಗಳೇ ಬವಸಣ್ನ ಭಾವ ಚಿತ್ರಕ್ಕೆ ಪೂಜೆ ಸಲ್ಲಿ ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಸಹ ಅತಿ ಸರಳ ರೀತಿಯಲ್ಲಿ ಅಚರಿಸಲಾಗಿದೆ.

Share
WhatsApp
Follow by Email