ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಥರ್ಮಾ ಮೀಟರ್ ವಿತರಣೆ

ಚಿಕ್ಕೋಡಿ: ದೇಶದಲ್ಲಿಯೇ ಮೊದಲ ಬಾರಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ನಿಪ್ಪಾಣಿ ನಗರಸಭೆಯ ವತಿಯಿಂದ ಥರ್ಮಲ್ ಸ್ಕ್ರೀನಿಂಗ್ ಥರ್ಮಾ ಮೀಟರಗಳನ್ನು ನೀಡಲಾಗಿದೆ. ತಮ್ಮ ಕ್ಷೇತ್ರದಲ್ಲಿ ನಡೆದ ಈ ಕಾರ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸಚಿವೆ ಶಶಿಕಲಾ ಜೊಲ್ಲೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಿಪ್ಪಾಣಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಯೊಂದಿಗೆ ಆಯ್ ಎಮ್ ಎ, ರೋಟರಿ ಕ್ಲಬ್.ಇನ್ನಿತರ ಸಂಘ ಸಂಸ್ಥೆಗಳ ಮೂಲಕ ಸುಮಾರು 41 ಥರ್ಮಲ ಸ್ಕ್ರೀನಿಂಗ್ ಥರ್ಮಾ ಮೀಟರ್‍ಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆಯ ಸದಸ್ಯರು ಗಳು,ರೋಟರಿ ಕ್ಲಬ್ ನ ಸದಸ್ಯರು, ಆಯ್ ಎಮ್ ಎ ಸಂಘಟನೆಯ ಸದಸ್ಯರು ಹಾಜರಿದ್ದರು
Share
WhatsApp
Follow by Email