
ನಿಪ್ಪಾಣಿಯ ನಗರಸಭೆಯಲ್ಲಿ ಹಾಗೂ ಜಾತ್ರಾಟ ವೇಸನಲ್ಲಿ ಬಸವ ಜಯಂತಿ ಅಂಗವಾಗಿ ವಿಶ್ವದ ಮೊದಲ ಪ್ರಜಾಪ್ರಭುತ್ವ ದ ಜನಕ, ಮಹಾ ಮಾನವತಾವಾದಿ , ಸಮಾನತೆಯ ಸಂದೇಶ ಸಾರಿದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿ ಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೌರಾಯಕ್ತರಾದ ಮಹಾವೀರ ಬೋರನ್ನವರ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಬಿಜೆಪಿ ನಗರಾಧ್ಯಕ್ಷ ಶ್ರೀ ಪ್ರಣವ ಮಾನವಿ, ಹಾಲಸಿದ್ಧನಾಥ ಸಕ್ಕರೆ ಕಾಖಾ೯ನೆ ಅಧ್ಯಕ್ಷ ರಾದ ಚಂದ್ರಕಾಂತ ಕೋಟಿವಾಲೆ, ಹಾಗೂ ನಗರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.