ವಿಶ್ವಗುರು ಬಸವಣ್ಣನವರ 887 ನೇ ಜಯಂತ್ಯೋತ್ಸವವನ್ನು ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.

ಮುದ್ದೇಬಿಹಾಳ: ಪಟ್ಟಣದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ವಚನಕ್ರಾಂತಿ, ವರ್ಗರಹಿತ, ಸಮಾಜ ನಿರ್ಮಾತ ವಿಶ್ವಗುರು ಬಸವಣ್ಣನವರ 887 ನೇ ಜಯಂತ್ಯೋತ್ಸವವನ್ನು ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾಜಿ ಸಚೀವ ಸಿ ಎಸ್ ನಾಡಗೌಡ ಅವರು ಅಶ್ವಾರೂಢ ಬಸವೇಶ್ವರರ ಕಂಚಿನ ಪುಥ್ಥಳಿಗೆ ಹೂಮಾಲೆ ಸಮರ್ಪಿಸಿ ಹಣೆಗೆ ವಿಭೂತಿ ಹಚ್ಚಿಕೊಳ್ಳುವ ಮೂಲಕ ಭಕ್ತಿಯಿಂದ ಗೌರವ ನಮನ ಸಲ್ಲಿಸಿದರು.ತಹಶಿಲ್ದಾರ ಜಿ ಎಸ್ ಮಳಗಿಯವರು ಧ್ವಜಾರೋಹಣ ನೆರವೆರಿಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ ಅವರು ಪೂಜೆ ಸಲ್ಲಿಸದರು.ಸಿಪಿಐ ಆನಂದ ವಾಗ್ಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ, ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಜಿ ಪಾಟೀಲ(ಶ್ರಂಗಾರಗೌಡ), ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ತಾಲೂಕಾ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಎಪಿಎಂಸಿ ಸದಸ್ಯ ವಾಯ್ ಎಚ್ ವಿಜಯಕರ, ಬಾಜಪ ಮುಖಂಡ ಶರಣು ಬೂದಿಹಾಳಮಠ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಲೂಕಾ ಶರಣ ಸಾಹಿತ್ಯ ಅಧ್ಯಕ್ಷ ಬಸವರಾಜ ನಾಲತವಾಡ, ಮನೆಯಲ್ಲಿ ಮಾಹಾಮನೆ ಬಳದ ಅಧ್ಯಕ್ಷ ಎಸ್ ಬಿ ಬಂಗಾರಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರೇಶ ಕಿತ್ತೂರ ದಾನಪ್ಪ ಕಡಿ, ಪುರಸಭೆ ಸದಸ್ಯ ವಿರೇಶ ಹಡಲಗೇರಿ, ಸೊಮನಗೌಡ ಪಾಟೀಲ(ನಡಹಳ್ಳಿ), ಪುರಸಭೆ ಕಂದಾಯ ನಿರಿಕ್ಷಕಿ ಎಂ ಬಿ ಮಾಡಗಿ, ಸಿಬ್ಬಂದಿಗಳಾದ ರಮೇಶ ಮಾಡಬಾಳ, ಮಹಾಂತೇಶ ಕಟ್ಠಿಮನಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಚ್ ಎಲ್ ಕರಡ್ಡಿ, ಪಶುವೈದ್ಯಾಧಿಕಾರಿ ಡಾ, ಎ ಎಸ್ ಛ್ಧರಿ ಸೇರಿದಂತೆ ಮತ್ತಿತರರು ಇದ್ದರು,
Share
WhatsApp
Follow by Email