ಶುಭ ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಒಂದು ಕೊರೋನಾ ಪಾಸಿಟೀವ್ ಇಲ್ಲ

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಸೋಮವಾರ ಮದ್ಯಾಹ್ನ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಎಂದು ರ‍್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಪ್ರಕಟಿಸಿದೆ. ರ‍್ನಾಟಕದಲ್ಲಿ ಕೊರೊನಾ ಪ್ರಕರಣ ಒಟ್ಟು 511ಕ್ಕೆ ಏರಿದೆ. ಒಂದೇ ದಿನ ಎಂಟು ಕೇಸ್ ಏರಿಕೆಯಾಗಿವೆ.
ಬಾಗಲಕೋಟೆ -ವಿಜಯಪುರದಲ್ಲಿ ತಲಾ ಎರಡು, ದಕ್ಷಿಣ ಕನ್ನಡ ಕನ್ನಡ ಎರಡು, ನಾಗಮಂಗಲ ಒಂದು, ಬೆಂಗಳೂರು ಒಂದು ಪ್ರಕರಣ ದಾಖಲಾಗಿದೆ .
ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 54 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಈ ಪೈಕಿ ಗುಣಮುಖರಾಗಿರುವ 6 ಜನರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ.
Share
WhatsApp
Follow by Email