ಕೂಲಿ ಕಾರ್ಮೀಕರ ಯೋಗಕ್ಷೇಮ ಮತ್ತು ಆರೋಗ್ಯ ತಪಾಸಣೆಗಾಗಿ ಮುನ್ನಚ್ಚರಿಕೆ ಕ್ರಮಾಗಿ ತಾಲೂಕಾ ಅಗ್ನಿ ಶಾಮಕ ದಳದವರಿಂದ ಸ್ಯಾನಿಟೈಜರ್ ಸಿಂಪಡಣೆ

ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದಿಂದ ಅಂತರಾಜ್ಯ, ಮತ್ತು ವಿವಿಧ ಜಿಲ್ಲೇಗಳಿಗೆ ಉದ್ಯೋಗಕ್ಕಾಗಿ ಗೂಳೆ ಹೋದ ಸುಮಾರು 10 ಸಾವಿರಕ್ಕು ಹೆಚ್ಚು ಕೂಲಿ ಕಾರ್ಮಿಕರ ಕುಡಂಭಗಳನ್ನು ರಕ್ಷಸುವ ನಿಟ್ಟಿನಲ್ಲಿ ಸರಕಾರೊಂದಿಗೆ ಸಮಾಲೋಚನೆ ನಡೆಸಿ ವಾಪಸ್ ಮತಕ್ಷೇತ್ರಕ್ಕೆ ಕರೆಸಿಕೊಳ್ಳಲು ಸಿದ್ದತೆ ಕೈಗೊಳ್ಳಲಾಗಿದೆ ಹಾಗಾಗಿ ನೀವು ಬರುವಿಕೆಯನ್ನು ಕಾಯ್ದು ಕುಳಿತು ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಹೇಳಿದರು.
ಪಟ್ಟಣದ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಸ್ವಚ್ಛತೆ ಮತ್ತು ಇನ್ನಿತರ ವ್ಯವಸ್ಥೆಗಳನ್ನು ತಹಶಿಲ್ದಾರ ಜಿ ಎಸ್ ಮಳಗಿ ಅವರ ಸಮ್ಮುಖದಲ್ಲಿ ಪರಿಶಿಲಿಸಿ ಅವರು ಮಾತನಾಡಿದರು.
ಈಗಾಗಲೇ ನಮ್ಮ ಮತಕ್ಷೇತ್ರದಿಂದ ಗೊವಾ, ಮಹಾರಾಷ್ಟç, ಪುನಾ, ಆಂದ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಮತ್ತು ಕರ್ನಾಟಕದ ಬಹುತೇಕ ಜಿಲ್ಲೇಗಳಿಗೆ ಉದ್ಯೋಗ ಅರಸಿ ಹೋಗಿ ನೆಲಸಿರುವುದು ಮಾತ್ರವಲ್ಲದೇ ಸಧ್ಯ ಕೊರೊನಾ ಲಾಕ್ ಡೌನ ಹಿನ್ನೇಲೆಯಲ್ಲಿ ಅನ್ನ ನೀರು, ಆಹಾರ ದೊರಕದೆ ಇರುವ ಸ್ಥಿತಿಗತಿಯನ್ನು ಅವರ ಸಂಕಷ್ವನ್ನು ಅರಿತುಕೊಂಡು ಹೇಗಾದರೂ ಮಾಡಿ ಅವರನ್ನು ಮರಳಿ ನಮ್ಮ ಮತಕ್ಷೇತ್ರಕ್ಕೆ ಕರೆಯಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇಗಾಗಲೇ ಸಾರಿಗೆ ಸಚೀವ ಲಕ್ಷö್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರೊಂದಿಗೆ ಸಮಗ್ರವವಾಗಿ ಆಗು ಹೋಗುಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಮ್ಮ ಮತಕ್ಷೇತ್ರೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಕೆ ಎಸ್ ಆರ್ ಟಿ ಸಿ ಯ ಸುಮಾರು 80 ಬಸ್‌ಗಳ ವ್ಯವಸ್ಥೆ ಕೈಗೊಳ್ಳಲಾಗಿದೆ.
ಜೊತೆಗೆ ತಾಲೂಕಿನ ಬಸ್ ನಿಲ್ದಾಣಕ್ಕೆ ಬಂದು ತಲುಪಿದ ತಕ್ಷಣವೇ ತಾಲೂಕಾ ಆರೋಗ್ಯ ಇಲಾಖೆ ಹಿರಿಯ ವೈದ್ಯಾಧಿಕಾರಿಗಳ ಮೂಲಕ ಆಯಾ ಕುಟುಂಭದವರಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಬಳಿಕ ಪ್ರತಿಯೊಬ್ಬರ ಕುಟುಭಂದವರ ಮಕ್ಕಳು ಶಿಕ್ಷಣ ಸೇರಿದಂತೆ ಸಂಪೂರ್ಣ ಮಾಹಿತಿಯೊಂದಿಗೆ ದಾಖಲೆಯನ್ನು ಪಡೆದುಕೊಳ್ಳಲಾಗುವುದು. ಸಂಪೂರ್ಣ ಗುಣಮುಖರಾಗಿದ್ದವರಿಗೆ ಆಯಾ ಕುಟುಂಭದವರನ್ನು ಆಯಾ ಗ್ರಾಮಗಳಿಗೆ ಸರಕಾರದ ನಿಯಮಾನುಸಾರ ಮನೆ ಬಿಟ್ಟು ಹೊರಗೆ ಬರದಂತೆ, ಸಾಮಾಜಿಕ ಅಂತರ ಕಾಯ್ದಯಕೊಳ್ಳುವಂತೆ ಸೂಚನೆ ನೀಡಿ ಮುಂದಿನ 15 ದಿನಗಳವರೆಗೆ ಅವರಿಗೆ ಊಟದ ಯಾವೂದೇ ತೊಂದರೆಯಾಗದAತೆ ನನ್ನ ಸ್ವಂತ ಹಣದಲ್ಲಿಯೇ ದಿನಸಿ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗುವುದು.
ಆರೋಗ್ಯದಲ್ಲಿ ಕೆಲವು ಸಂಶಯಾಸ್ಪದ ರೋಗ ಲಕ್ಷಣಗಳು ಕಂಡು ಬಂದವರನ್ನು ತಾಲೂಕಾ ಆಸ್ಪತ್ರೆ ಹಾಗೂ ಇತರೆಡೆಗೆ ಕ್ವಾಂಟೈನ ಮಾಡಿ ಸೂಕ್ತ ಆರೋಗ್ಯ ರಕ್ಷಣೆ ಒದಗಿಸಲಾಗುವುದು.
ಈಗಾಗಲೇ ಕರ್ನಾಟಕ ರಾಜ್ಯದೊಳಗಿನ ವಿವಿಧ ಜಿಲ್ಲೇಯಲ್ಲಿರುವ ನಮ್ಮ ಮತಕ್ಷೇತ್ರದ ಕೂಲಿ ಕಾರ್ಮಿಕರು ತಕ್ಷಣ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು, ತಾಲೂಕಾ ಕೇಂದ್ರದಲ್ಲಿರುವವರು ಆಯಾ ತಾಲೂಕಿನ ತಹಶಿಲ್ದಾರ ಅವರನ್ನು ಸಂಪರ್ಕಿಸಿ ನಿಮ್ಮ ನೋವನ್ನು ಮತ್ತು ಎಲ್ಲಿಗೆ ಹೋಗಬೇಕು ಎಷ್ಟು ಜನ ಕುಟುಂಭದವರಿದ್ದರಿ ಎಂಬುದನ್ನು ಮಾಹಿತಿ ನೀಡಬೇಕು ಆಗ ನಮ್ಮ ತಾಲೂಕಿನ ತಹಶಿಲ್ದಾರೊಂದಿಗೆ ಸಮಾಲೋಚನೆ ನಡೆಸಿ ತಮ್ಮನ್ನು ಕೆ ಎಸ್ ಆರ್ ಟಿ ಸಿ ಬಸ್ ಗಳ ಮೂಲಕ ಉಚಿತವಾಗಿ ಕರೆಯಿಸಿಕೊಳ್ಳುವ ಕಾರ್ಯ ಮಾಡಲಾಗುತ್ತದೆ.
ಅಂತರಾಜ್ಯದಲ್ಲಿ ವಾಸವಾಗಿರುವ ಕಾರ್ಮಿಕರನ್ನು ಅಲ್ಲಿನ ಸರಕಾರದೊಂದಿಗೆ ನಮ್ಮ ಸರಕಾರದವರು ಸಮಾಲೋಚನೆ ನಡೆಸುವ ಹೇಗೆ ಕರೆಸಿಕೊಳ್ಳಬೇಕು ಎಂಬುದನ್ನು ತಿರ್ಮಾನಿಸಿ ಅವರನ್ನು ಕೂಡ ನಮ್ಮ ಮತಕ್ಷೇತ್ರಕ್ಕೆ ಕರೆಸಿಕೊಳ್ಳುವಲ್ಲಿ ಪ್ರಾಮಾನಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ತಹಶಿಲ್ದಾರ ಜಿ ಎಸ್ ಮಳಗಿ,ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕ, ತಾಲೂಕಾ ಆರೊಗ್ಯ ಇಲಾಖೆ ಅಧಿಕಾರಿ ಡಾ, ಸತೀಶ ತಿವಾರಿ, ಬಿಜೆಪಿ ತಾಲೂಕಾ ಮಂಡದ ಅಧ್ಯಕ್ಷ ಪರುಶುರಾಮ ಪವಾರ, ಡಿ ಸಿ ಬ್ಯಾಂಕ ನಿರ್ಧೇಶಕ ಸೋಮನಗೌಡ ಬಿರಾದಾರ, ಮುಖಂಡರಾದ ರಾಜಶೇಖರ ಹೊಳಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಮೋನೊಹರ ಪೋದ್ದಾರ ಸೇರಿದಂತೆ ಮತ್ತಿತರರು ಇದ್ದರು.
ಕೋಟ್
ನನ್ನ ಮತಕ್ಷೇತ್ರ ಜನರನ್ನು ಕೂಲಿ ಕಾರ್ಮಿಕರನ್ನು ರಕ್ಷೀಸುವುದು ನನ್ನ ಜವಾಬ್ದಾರಿಯಾಗಿದೆ ಹಾಗಾಗಿ ಮತಕ್ಷೇತ್ರ ಬಹುತೇಕ 126 ಗ್ರಾಮಗಳಲ್ಲಿನ ನಮ್ಮ ಕಾರ್ಯಕರ್ತರಿಗೆ ಮುಖಂಡರುಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಆಯಾ ಗ್ರಾಮಗಳಲ್ಲಿನ ಯಾವ ಕುಟುಂಭದವರು ಯಾವ ಜಿಲ್ಲೆಯಲ್ಲಿ ಯಾವ ರಾಜ್ಯದಲ್ಲಿ ವಾಸವಾಗಿದ್ದಾರೆ ಎಂಬದನ್ನು ಸಮಗ್ರ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಲಾಕ್ ಡೌನ ವೇಳೆ ಯಾವ ಕೂಲಿ ಕಾರ್ಮಿಕನು ಬಡವರು ಯಾರೋಬ್ಬರು ಉಪವಾಸದಿಂದ ನರಳಬಾರದು ಎಂಬ ಉದ್ದೇಶವಾಗಿದೆ ಈ ನಿಟ್ಟಿನಲ್ಲಿ ಈ ಮತಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ.
Share
WhatsApp
Follow by Email