ಕೊರೋನಾ ನಿರ್ಮೂಲನಾ ಹೋರಾಟದಲ್ಲಿ ಸಿಬ್ಬಂದಿ ಶ್ರಮ ಶ್ಲಾಘನೀಯ : ಸಂಸದ ಪಿ. ಸಿ. ಗದ್ದಿಗೌಡರ

ಜಿಲ್ಲೆಯ 1091 ಕುಟುಂಬಗಳಿಗೆ ತಿಂಗಳ ದಿನಸಿ ! ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ

ಮಹಾಲಿಂಗಪುರ : ಇಡೀ ರಾಜ್ಯ ಕೊರೋನಾ ಮುಕ್ತ ಆಗುವ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ಶ್ಲಾಘನೀಯ ಎಂದು ಸಂಸದ ಪಿ. ಸಿ. ಗದ್ದಿಗೌಡರ ಹೇಳಿದರು.
ಸೋಮವಾರ ಸಂಜೆ ನಗರದ ಪುರಸಭೆಯ ಆವರಣದಲ್ಲಿ ಕ್ಷೌರಿಕ ಸಮಾಜಕ್ಕೆ ಆಹಾರ ಕಿಟ್ ವಿತರಿಸಿ ಮಾತನಾಡುತಿದ್ದ ಅವರು ಜಿಲ್ಲೆಯಲ್ಲಿ ಇದುವರೆಗೂ ಕಂಡು ಬಂದ 26 ಕೊರೋನಾ ಸೋಂಕಿತರ ಪೈಕಿ ಈಗಾಗಲೇ 6 ಜನ ಗುಣಮುಖರಾಗಿದ್ದು ಉಳಿದ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲಾಗುತಿದ್ದು ಅವರೂ ಸಹ ಗುಣಮುಖರಾಗುವ ವಿಶ್ವಾಸವಿದೆ ಎಂದರು.
ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಾಗಲಕೋಟೆ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಸಹಾಯ ಕೋರಿ ಸಮಾಜದ ಜಿಲ್ಲಾ ಅಧ್ಯಕ್ಷರು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಏ. 22 ರಂದು ಮನವಿ ಸಲ್ಲಿಸಿದ್ದರು.
ಇದರ ಮೇರೆಗೆ ಸಚಿವರ ಆದೇಶದಂತೆ ಎಸ್ ಡಿ ಆರ್ ಎಫ್ ಅನುದಾನದಡಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಇವರ ಸಹಯೋಗದಲ್ಲಿ ಸ್ಥಳೀಯ ಹಡಪದ ಅಪ್ಪಣ್ಣ ಸಮಾಜದ ಬಾಗಲಕೋಟೆ ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಹಡಪದ (ಅಪ್ಪಣ್ಣ) ಕ್ಷೌರಿಕ 1091 ಕುಟುಂಬಗಳನ್ನು ಗುರುತಿಸಿ ಮತ್ತು ಸ್ಥಳೀಯ 66 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಕಿಟ್ ಗಳನ್ನು ತಯಾರಿಸಲಾಗಿತ್ತು.
ತಹಶೀಲ್ದಾರ್ ಪ್ರಶಾಂತ ಚನಗೊಂಡ, ಪುರಸಭಾ ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಭಾಜಪ ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭಾ ಸದಸ್ಯರಾದ ಶೇಖರ್ ಅಂಗಡಿ, ಮಹಾಲಿಂಗಪ್ಪ ಕೋಳಿಗುಡ್ಡ, ಮಾಜಿ ಪುರಸಭಾ ಅಧ್ಯಕ್ಷ ಜಿ. ಎಸ್. ಗೊಂಬಿ ಹಾಗೂ ನೂತನ ಚುನಾಯಿತ ಸದಸ್ಯರಿದ್ದರು.
ಬಾಕ್ಸ್ ನ್ಯೂಸ್ :
ಶಾಸಕ ಸಿದ್ದು ಸವದಿ, ತೇರದಾಳ ಮತ ಕ್ಷೇತ್ರ
ಪ್ರತಿ ಕುಟುಂಬಕ್ಕೆ 5 ಕೆಜಿ ಗೋಧಿ, 2 ಕೆಜಿ ಅವಲಕ್ಕಿ, 1ಕೆಜಿ ರವ, 2 ಕೆ ಜಿ ಸಕ್ಕರೆ, 100 ಗ್ರಾಂ ಚಹಾಪುಡಿ, 1 ಕೆಜಿ ತೊಗರಿಬೇಳೆ, 1 ಲೀ. ಎಣ್ಣೆ, 1 ಕೆಜಿ ಬೆಲ್ಲ, 1/2 ಕೆಜಿ ಖಾರದ ಪುಡಿ, ಉಪ್ಪು, ಜೊತೆ ಸ್ನಾನದ ಹಾಗೂ ಬಟ್ಟೆ ಸಾಬೂನು ಮುಂತಾದ ಆಹಾರ ಪದಾರ್ಥಗಳನ್ನೊಳಗೊಂಡ 1200/ ರೂ. ಮೌಲ್ಯದ ಆಹಾರ ಕಿಟ್ ವಿತರಿಸಲಾಗಿದೆ.
Share
WhatsApp
Follow by Email