ಜಮಖಂಡಿ. ಏ.28 : ನಗರದಲ್ಲಿ ಮತ್ತೆ 3 ಜನರಿಗೆ ಕರೋನಾ ಸೊಂಕು ಪಾಜಿಟಿವ್ ತಾಲೂಕಿನ ಜನತೆಯಲ್ಲಿ ಆತಂಕ.


ನಗರದ ಖಾಟಿಕ್ ಗಲ್ಲಿಯ ಪೆ-456 ಸೊಂಕಿತನ ದ್ವಿತೀಯ ಸಂಪರ್ಕದಿಂದ ಮತ್ತೋಂದು ಪೆ-522 ಸೊಂಕು ಮತ್ತು ಅವಟಿ ಗಲ್ಲಿಯ ಪೆ-381 ಸೊಂಕಿತನ ಸಂಪರ್ಕದಿಂದ ಎರಡು ಪೆ-521 ಮತ್ತು ಪೆ-523 ಸೊಂಕು ತಗುಲಿದರಿಂದ ನಗರದಲ್ಲಿ ಒಟ್ಟು 9 ಜನರು ಸೊಂಕಿತರಾಗಿದ್ದಾರೆ.
ಕಳೆದ ದಿನ 2 ಜನರಿಗೆ ಸೊಂಕು ಪತ್ತೆಯಾಗಿತ್ತು ಆದರೆ ನಗರದಲ್ಲಿ ಇಂದು 3 ಜನರಿಗೆ ಸೊಂಕಿತರ ಸಂಖ್ಯೆ ಹೆಚ್ಚಾಗಿದ ವರದಿಯಿಂದಾಗಿ ತಾಲೂಕಿನ ಜನತೆಯಲ್ಲಿ ಮತ್ತೆ ಆತಂಕ ಮೂಡಿಸಿದೆ.
ನಗರದಲ್ಲಿ ಇಂದು 3 ಜನರಿಗೆ ಸೊಂಕು ಹರಡಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಾಕ್‌ಡಾನ್ ಮುಕ್ತಾಯವಾಗುವವರೆಗೆ ನಗರದಲ್ಲಿ ದ್ವೀಚಕ್ರ ವಾಹನಗಳ ಸಂಚಾರವನ್ನು ವೈದ್ಯಕೀಯ ಕಾರಣ ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾರಣವಿಲ್ಲದೆ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.
Share
WhatsApp
Follow by Email