ದಾನದ ಹೆಸರಿನಲ್ಲಿ ಭಾರಿ ಪ್ರಚಾರ ಪಡೆಯುತ್ತಿರುವ ಜನಪ್ರತಿನಿದಿಗಳು ?

ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೆ ವಿಶೇಷ.

ನಿಯಮ ಉಲ್ಲಂಘನೆ ಮಾಡುತ್ತಿರುವ ಜನಪ್ರತಿದಿಗಳು , ದಾನ ಮಾಡಿದ ಪೋಟೋ ವೀಡಿಯೋ ಪ್ರಚಾರಕ್ಕೆ ಬಳಕೆ.
ಮುದ್ದೇಬಿಹಾಳ : ಜಗತ್ತೇ ಮಹಾಮಾರಿ ಕೊರೊನಾ ವೈರಸ್‌ನಿಂದ ಬಳಲುತ್ತಿದೆ, ಆರ್ಥಿಕ ವ್ಯವಸ್ಥೇ ಹದೆಗೆಟ್ಟು ಕಂಗಾಲಾಗಿದೆ. ಭಾರತ ದೇಶದಲ್ಲಿಯೂ ಕೊರೊನಾ ತನ್ನ ರುದ್ರನರ್ತನದಿಂದ ಇಡೀ ದೇಶವನ್ನೇ ಲಾಕ್ಡೌನನಿಂದ ಬಂದಿಸಿ ಜನರನ್ನು ಮೂಕ ರೋಧನೆಗೆ ಕೊಂಡೋಯ್ಯುತ್ತಿದೆ. ಆದರೆ ಜನರ ಆಶೋತ್ತರಗಳಿಗೆ ಉತ್ತರಿಸಬೇಕಾದ ಜನಪ್ರತಿನಿಧಿಗಳು ತಮಗೂ ಕೊರೋನಾ ಮಾಹಾಮಾರಿ ಒಕ್ಕರಿಸಬಹುದೆಂಬ ಆತಂಕದಿAದ ಮತದಾರ ಪ್ರಭುಗಳಿಂದ ದೂರ ಉಳಿಯುತ್ತಿದ್ದಾರೆ.
ಅದರಲ್ಲಿಯೂ ಕೇಲವು ಜನಪ್ರತಿನಿಧಿಗಳು ಮನಸಾರೆ ಕಾರ್ಮಿಕರಿಗೆ, ಸ್ಲಂ ಜನರಿಗೆ, ಶೋಷಿತರಿಗೆ ದಾನ ಮಾಡುವರು ಇದ್ದಾರೆ, ಇನ್ನೂ ವಿಶೇಷ ಎಂಬAತೆ ಕರ್ಚು ಮಾಡಿದ್ದು ನಾಲ್ಕಾಣೆ ಮಾಧ್ಯಮದಲ್ಲಿ ಒಂದು ರೂಪಾಯಿ ಪ್ರಚಾರ ಗಿಟ್ಟಿಸಿಕೊಳ್ಳುವ ಜನಪ್ರತಿನಿದಿಗಳು ಇದ್ದಾರೆ ಎಂಬುವದೇ ನಮ್ಮ ದುರ್ದೈವ ಅಲ್ಲವೇ ?
ಹೌದು ರಾಜ್ಯದಲ್ಲಿ ಕೊರೋನಾ ಹೊಡೆತಕ್ಕೆ ನುಚ್ಚುನೂರಾಗಿರುವ ಬಡವರ ಬದುಕಿಗೆ ಆಸರೆಯಾಗಬೇಕಿದ್ದ ಕೇಲವು ಜನಪ್ರತಿನಿದಿಗಳು, ವಯಸ್ಸಾಗಿದೆ ಎನ್ನುವ ನೆಪ ಹೇಳಿ, ಅಥವಾ ಹೊರಗಡೆ ವೈರಸ್‌ನ ಬಯದಿಂದ ಮನೆಯಿಂದ ಹೊರಗೆ ಬರುತ್ತೀಲ್ಲಾ. ವಯಸ್ಸಾಗಿದೆ ತಿರುಗಾಡಲೂ ಸುಸ್ತಾಗುತ್ತೇ ಎನ್ನುವ ನಾಯಕರೇ ಚುನಾವಣೆ ಸಂಧರ್ಭದಲ್ಲಿ ಕುದುರೆಯಂತೆ ದಿನಕ್ಕೆ ಹತ್ತು ಸ್ಥಳಗಳಲ್ಲಿ ರಾಜಕೀಯ ಭಾಷಣ ಬಿಗಿಯುತ್ತಿದ್ದೀರಿ ? ಆವಾಗ ನಿಮಗೆ ವಯಸ್ಸಾಗಿದ್ದಿಲ್ಲವೇ ? ಎಂದು ಜನರು ನಿಮಗೆ ನೇರವಾಗಿ ಪ್ರಶ್ನೇ ಹಾಕುತ್ತಿದ್ದಾರೆ ಸ್ವಾಮಿ ಮನೆಗಳನ್ನು ಬಿಟ್ಟು ಹಳ್ಳಿಗಳ ಕಡೆ ಗಮನ ಕೊಡಿ ಹಳ್ಳಿಯ ಜನರು ಮನುಷ್ಯರಲ್ಲವೇ ಅವರು ನಿಮಗೆ ಮತಗಳನ್ನು ಹಾಕಿಲ್ಲವೇ ಎಂದು ಜನರು ಕೇಳುತ್ತಿದ್ದಾರೆ ನಿಮ್ಮ ಉತ್ತರವೇನು ಜನಪ್ರತಿನಿಧಿಗಳೇ ?
ಇವರ ಮದ್ಯದಲ್ಲಿಯೇ ಇನ್ನೊಂದು ಜನಪ್ರತಿನಿದಿಗಳ ಗುಂಪಿದೆ ಅದು ಏನಂದರೆ ಇವರು ಒಂದು ಬಡವರಿಗೆ ಬಿಸ್ಕೇಟ್ ಕೊಟ್ಟರು ಮಾದ್ಯಮದಲ್ಲಿ ಭಾರಿ ಪ್ರಚಾರ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯಂತೂ ಇವರದೇ ಹವಾ, ಸ್ವಾಮಿ ನಿವು ದಾನ ಮಾಡಿದ್ದು ಒಂದು ಹೋತ್ತಿನ ಗಂಜಿ, ಅದು ನಿಮ್ಮ ಕರ್ತವ್ಯ ಕೂಡಾ. ಅದನ್ನೇ ಮುಂದಿನ ಚುನಾವಣೆಯ ಲೆಕ್ಕಚಾರದಲ್ಲಿ ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿರಲ್ಲಾ ನಿಮಗೇನಾದರೂ ಮಾನವೀಯತೆ ಇದೆಯಾ ? ಅಥವಾ ಸತ್ತು ಹೊಗಿದೆಯಾ ? ಎಂದು ಪ್ರಗತಿಪರ ಚಿಂತಕರು ಪ್ರಶ್ನೇ ಮಾಡುತ್ತಿದ್ದಾರೆ.
ನಿವು ದಾನ ಮಾಡಿ ಜನಪ್ರತಿನಿದಿಗಳಾದ ನಿಮ್ಮ ಆದ್ಯ ಕರ್ತವ್ಯ ಅದಕ್ಕಂತಯೇ ತಾನೆ ನಿಮ್ಮನ್ನು ಜನರು ವಿದಾನಸಭೆಯ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಕಳುಹಿಸಿದ್ದು, ದಾನ ಮಾಡುವದು ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗಬಾರದು , ಅದು ನಿಜವಾದ ದಾನ ಮಾಡಿದಂತೆ ಎಂದು ಅನೇಕ ಸಂತರು , ಶರಣ ಹೇಳಿದ್ದಾರೆ, ಅದು ನಿಮಗೆ ತಿಳಿದಿಲ್ಲವೇ ಅಥವಾ ಪ್ರಚಾರದ ಬರದಲ್ಲಿ ಮರೆತು ಹೊಗಿದ್ದಿರಾ ? ನಿವು ದಾನವನ್ನು ಮಾಡುವದು ಪ್ರಚಾರದÀ ತೆವಲಿನಕ್ಕಾಗಿಯೋ ಅಥವಾ ಬಡವರ ಹೊಟ್ಟೆಯನ್ನು ತುಂಬಿಸುವದಕ್ಕಾಗಿಯೋ ಜನರಿಗೆ ತಿಳಿಯುತ್ತಿಲ್ಲಾ .
ನಿಮ್ಮ ಪ್ರಚಾರ ಮಾತ್ರ ವರ್ಷಪೂರ್ತಿ ಇರಬೇಕು, ಯಾಕೆ ಇಂತಹ ಸಂಧರ್ಭದಲ್ಲಿಯೂ ಪ್ರಚಾರದ ಗೀಳು ಬಿಟ್ಟಿಲ್ಲಾ ಎಂದರೆ ಏನು ಹೇಳಬೇಕು ಸ್ವಾಮಿ. ನಿವು ಮಾಡುತ್ತಿರುವ ದಾನಕ್ಕೆ ನಮ್ಮದೊಂದು ಸಲಾಂ ಆದರೆ ಅದು ನಿಜವಾಗಲೂ ಬಡವರಿಗೆ ಮುಟ್ಟಬೇಕು , ಯಾರೋ ಒಬ್ಬರಿಗೆ ಕೊಟ್ಟು ಅದನ್ನೇ ಮಾದ್ಯಮದಲ್ಲಿ ಬಿತ್ತರಿಸಿ ಪ್ರಚಾರ ಪಡೆಯಲು ನಿಮ್ಮ ಮನಸ್ಸೇಗೆ ಬರುತ್ತದೆ.
ಯಾತಕ್ಕಾಗಿ ನಿಮ್ಮ ಪ್ರಚಾರ ?
ನಮ್ಮ ಸಂವಿದಾನದ ಪ್ರಕಾರ ಜನರಿಂದ ಜನರಿಗಾಗಿ ಜನರಿಗೋಸ್ಕರ ನಮ್ಮ ಸಂವಿದಾನದಡಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಇಂದು ಏನಾಗುತ್ತಿದೆ ನಮ್ಮ ಸಮಾಜಕ್ಕೆ ಎಂಬುವದು ತಿಳಿಯುತ್ತಿಲ್ಲಾ, ಯಾಕಂದರೆ ಕಾನೂನಿನ ಪ್ರಕಾರ ದೇಶದಲ್ಲಿ ಪ್ರಕೃತಿ ವಿಕೋಪವಾದಾಗ ಅದರಿಂದ ಜನಸಾಮಾನ್ಯರಿಗೆ ಯಾವದೇ ರೀತಿಯಲ್ಲಿ ತೊಂದರೆಯಾಗಬಾರದು, ಎಂದು ಸರಕಾರ ಮತ್ತು ಸ್ಥಳೀಯ ಗ್ರಾಮೀಣ ಮಟ್ಟದ ಜನಪ್ರತಿನಿದಿಗಳು, ಶಾಸಕರಾದವರು, ಜನರ ರಕ್ಷಣೆಗೆ ಕಂಕಣ ಬದ್ದರಾಗಿ ನಿಲ್ಲಬೇಕಾಗುತ್ತದೆ ಅದು ಅವರ ಕರ್ತವ್ಯವೂ ಹೌದು.
ನಮ್ಮ ಕಾನೂನು ಅದನ್ನೇ ಹೇಳುತ್ತದೆ. ಆದರೆ ಇಂದು ಕೆಲವು ಸೊಮಾರಿ ಜನಪ್ರತಿನಿದಿಗಳಿಂದ ಮತಕ್ಷೇತ್ರದ ಜನರು ಯಾವದೇ ನೀರಿಕ್ಷೆ ಸಫಲಗೊಳ್ಳುತ್ತಿಲ್ಲಾ. ಆದರೆ ಇನ್ನೊಂದು ಮತಕ್ಷೇತ್ರದ ಜನಪ್ರತಿನಿಧಿಗಳು ಜನರಿಗೆ ಅರ್ಧದಷ್ಟು ಸಹ ಧಾನ ಮಾಡದೇ ಭಾರಿ ಪ್ರಚಾರ ಪಡೆಯುವದು ಯಾವ ಪುರುಷಾರ್ಥಕ್ಕಾಗಿ ? ಎಂದು ಜನರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಚಾರ ?
ದೇಶದಲ್ಲಿ ಇಂದು ಸಾಮಾಜಿಕ ಜಾಲತಾಣವನ್ನು ಕೆಲವರು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಕೆಲವು ಜನಪ್ರತಿನಿದಿಗಳ ಮೇಲೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಡಿದ ಒಳ್ಳೆಯ ಕೆಲಸವನ್ನು ಮಾಡಿದಷ್ಟೇ ಹಾಕಿದರೆ ಯಾವದೇ ತೊಂದರೆ ಇಲ್ಲಾ, ಆದರೆ ಕೆಲವು ಜನಪ್ರತಿನಿಧಿಗಳು ತಮ್ಮ ಹೆಸರಿನಲ್ಲಿ ಕಚೇರಿಯ ಹೆಸರಿನಲ್ಲಿ, ಅಭಿಮಾನಿಗಳ ಹೆಸರಿನಲ್ಲಿ ಸುಮಾರು ಖಾತೆಗಳನ್ನು ತೆರೆದು ನಿರ್ವಹಿಸಲು ಸುಮಾರು ಯುವಕರನ್ನು ನೇಮಿಸಿಕೊಂಡಿದ್ದಾರೆ ,ಆದರೆ ನೇಮಿಸಿಕೊಂಡಿರುವ ಯುವಕರು ತಮ್ಮ ಜನಪ್ರತಿನಿದಿಗಳ ವ್ಯಾಮೋಹವೋ ಅಥವಾ ಅವರಿಗೆ ಆ ರೀತಿಯಲ್ಲಿ ತರಬೇತಿ ನೀಡಿರುತ್ತಾರೋ ಗೊತ್ತಿಲ್ಲಾ , ಭಾರಿ ಪ್ರಚಾರ ಮಾಡುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ ಎಂಬುವದು ಜನರ ವಾದ. ಸದ್ಯ ಜನಪ್ರತಿನಿಧಿಗಳು ತಮ್ಮ ಪ್ರಚಾರÀ ಜನರಿಗೆ ಬೇಗ ತಲುಪಲಿ ಎಂದು ಸಾಮಾಜಿಕ ಜಾಲತಾಣ ಬಳಸುತ್ತಾರೆ ಅದು ತಪ್ಪೆಂದು ಹೇಳುವದಿಲ್ಲಾ . ಆದರೆ ಅರ್ಧ ಕೆಲಸ ಮಾಡಿ ಭಾರಿ ಪ್ರಚಾರ ಪಡೆಯುವದು ಯಾವ ನ್ಯಾಯ ಎನ್ನುತ್ತಿದ್ದಾರೆ ಪ್ರಜ್ಞಾವಂತರು.
.
ಸರಕಾರ ಕಟ್ಟು ನಿಟ್ಟಿನ ಆದೇಶ ತರಲಿ.
ದೇಶದಲ್ಲಿ ಕೊರೋನಾ ವೈರಸ್‌ನಿಂದ ಜನಸಾಮಾನ್ಯರ ಬದುಕು ಕುಗ್ಗಿ ಹೊಗಿದ್ದು , ಲಾಕ್ಡೌನ್‌ನಿಂದ ಬಡವರು ಜೀವಿಸಲು ಕಷ್ಟಕರವಾಗುತ್ತಿದೆ. ಇದರಿಂದ ಒಳ್ಳೆಯ ಮನಸ್ಸಿನ ಧಾನಿಗಳು, ಮತ್ತು ಜನಪ್ರತಿನಿಧಿಗಳು ಬಡವರ ಸೇವೆಯಲ್ಲಿ ತಲ್ಲಿನರಾಗಿದ್ದಾರೆ, ಆದರೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಬಡವರಗೋಸ್ಕರ ದಾನವನ್ನು ಮಾಡಲು ಪ್ರಾರಂಬಿಸಬೇಕಿದೆ, ಅದು ಅವಶ್ಯ ಕೂಡಾ ನಮ್ಮ ಸಮಾಜಕ್ಕಿದೆ.
ಇಲ್ಲಿ ವಿಷಯ ಏನಪ್ಪ ಎಂದರೆ ಸರಕಾರ ಈ ಕೊರೋನಾ ವೈರಸ್‌ನ್ನು ಸದೆ ಬಡಿಯಲು ತಾಲೂಕಿಗೆ ಎಷ್ಟು ಅನುದಾನವನ್ನು ನೀಡಿದೆ ಎಂದು ಯಾರಿಗೂ ತಿಳಿಯುತ್ತಿಲ್ಲಾ, ಭರಿ ಸ್ಥಳೀಯ ಜನಪ್ರತಿನಿಧಿಗಳು ಬಡವರ ಸೇವೆಯಲ್ಲಿ ತಮ್ಮ ವಯಕ್ತಿಕವಾಗಿ ದಾನವನ್ನು ಮಾಡುತ್ತಿದ್ದಾರೆ. ಆದರಿಂದ ಬಡವರಿಗೆ ದಾನವನ್ನು ಮಾಡಿ ಪೋಟೋ, ವ್ಹೀಡಿಯೋ, ಮಾಡಿಕೊಂಡು ಪ್ರಚಾರ ಪಡೆಯುವದರಿಂದ ದಾನವನ್ನು ಪಡೆದುಕೊಂಡವರಿಗೆ ಮುಜುಗುರವಾಗಿ, ಬಡವರು ಹಣೆ ಹಣೆಯನ್ನು ಬಡಿದುಕೊಂಡು ಮರಗುತ್ತಿದ್ದಾರೆ, ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನೇಲ್ಲ ಮನಗಂಡು ಸರಕಾರ ಬಡವರಿಗೆ ದಾನ ಮಾಡುವ ಜನಪ್ರತಿನಿಧಿಗಳು ಪೋಟೋವನ್ನು ಅಥವಾ ವ್ಹೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾದ್ಯಮದಲ್ಲಿ ಪ್ರಚಾರ ಪಡೆಯುವದನ್ನು ನಿಲ್ಲಿಸಲು ಕಟ್ಟುನಿಟ್ಟಿನ ಅದೇಶ ತರಬೇಕಾಗಿದೆ.
Share
WhatsApp
Follow by Email