![](http://kannadatoday.in/wp-content/uploads/2020/04/IMG-20200430-WA0041-1024x485.jpg)
ನಿಪ್ಪಾಣಿ : ನಗರಸಭೆ ಕಾರ್ಯಾಲಯದಲ್ಲಿ ಎಲ್ಲ ಮುಸ್ಲಿಂ ಮುಖಂಡರೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಮಾತುಕತೆ ನಡೆಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡುತ್ತಾ ರಂಜಾನ್ ತಿಂಗಳು ಮುಸ್ಲೀಮರ ಹಬ್ಬ ಹರಿದಿನಗಳಲ್ಲಿ ತುಂಬಾ ಪವಿತ್ರ ಹಬ್ಬವಾಗಿದೆ, ಎಲ್ಲರಿಗೂ ರಂಜಾನ್ ತಿಂಗಳಿನ ಶುಭಾಶಯ ಕೋರುತ್ತಾ, ಸರಕಾರ ಹೊರಡಿಸಿರುವ ಲಾಕ್ ಡೌನ್ ನಿಯಮಗಳನ್ನು ಪಾಲಿಸುತ್ತಾ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಚ್ಛತೆಗೆ ಆದ್ಯತೆ ನೀಡಿ, ನಿಮ್ಮ ನಿಮ್ಮ ಮನೆಗಳಲ್ಲಿಯೇ ಆಚರಿಸುವ ಮೂಲಕ ದೇಶದಲ್ಲಿ ಆವರಿಸಿರುವ ಕೊರೋನಾ ಹೊಡೆದೋಡಿಸಲು ಸಾಧ್ಯವೆಂದು ಹೇಳಿದರು.
ಸಿಬಿಐ ಸತ್ಯನಾಯಿಕ ಮಾತಾಡುತ್ತಾ ಪೊಲೀಸ್ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ಲಾಕ್ ಡೌನ್ ಸಂದರ್ಭದಲ್ಲಿ ರಂಜಾನ್ ತಿಂಗಳು ಬಂದಿದ್ದರಿಂದ ಕೆಲವೊಂದು ವಿಶಿಷ್ಟ ನಿಯಮಗಳನ್ನು ಮಾಡಲಾಗಿದೆ, ಆದಕಾರಣ ಸಾಮೂಹಿಕ ನಮಾಜ ಮಾಡಲು, ಅಜಾನ್ ಹೊರಡಿಸಲು ಬಂದಿ ಇರುವದರಿಂದ ಸಮಾಜ ಬಾಂಧವರಿಗೆ ನಮಾಜದ ವೇಳೆ ಗೊತ್ತಾಗಲಿ ಎಂದು ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ 10 ಸೆಕೆಂಡ್ ಅಜಾನ್ ಮಾಡಲಿಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ, ರಂಜಾನ್ ತಿಂಗಳಿನಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ್ ಗಾಯಕವಾಡ, ಸಿಪಿಐ ಸಂತೋಷ್ ಸತ್ಯನಾಯಿಕ, ಪೌರಾಯುಕ್ತ ಮಹಾವೀರ ಬೋರಣ್ಣವರ, ನಗರಸಭೆ ಸದಸ್ಯ ಜಯವಂತ ಬಾಟಲೆ, ಸಲೀಂ ನಗಾರಜಿ, ಸಂತೋಷ ಸಾಂಗವಕರ, ರಾಜು ಗುಂದೇಶಾ, ವಿಜಯ ಟವಳೆ, ಬಂಡಾ ಘೋರ್ಪಡೆ, ಉಮಾರ ಕಾಝೀ, ಜುಬೇರ ಬಾಗವಾನ, ಇರ್ಫಾನ್ ಮಹಾತ, ಇಲಿಯಾಜ ಪಟವೆಗಾರ, ಸಲೀಂ ಬಾಗವಾನ, ಮೌಲಾನಾ ಇಲಿಯಾಜ, ಹಫೀಜ್ ಇಸ್ಮಾಯಿಲ, ಇವರೊಂದಿಗೆ ಮುಖಂಡರು, ಅಧಿಕಾರಿಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು