ಬ್ರೇಕಿಂಗ್ ನ್ಯೂಸ್ ಚಿಕ್ಕೋಡಿ: ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆಲ್ಲಾ ನರೇಗಾದಲ್ಲಿ ಕೆಲಸ 01/05/202001/05/2020 admin ಚಿಕ್ಕೋಡಿ: ಕೊರೊನಾ ಲೌಕ್ ಡೌನನಿಂದ ತಾಲೂಕಿನಲ್ಲಿರುವ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆಲ್ಲಾ ನರೇಗಾದಲ್ಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕ(ಗ್ರಾಮೀಣ) ಶಿವಾನಂದ ಶಿರಗಾಂವೆ ಹೇಳಿದರು.ಶುಕ್ರವಾರ ತಾಲೂಕಿನ ಬೆಳಕೂಡ,ಬಂಬಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ಯವಾಗಿ ಸಿಹಿ ಹಂಚಿ ದಿನಾಚರಣೆ ಆಚರಿಸಿದರು.ಕಾರ್ಮಿಕರಿಗಾಗಿಯೇ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ನರೇಗಾದಡಿ ಕೆಲಸ ಮಾಡುವ ಮಹಿಳೆ ಮತ್ತು ಪುರುಷರಿಗೆ ಸಮಾನ ಕೆಲಸ ಸಮಾನ ವೇತನ ನೀಡಲಾಗುತ್ತಿದೆ ಎಂದರು.ತಾಲೂಕ ಪಂಚಾಯತಿ ಐಇಸಿ ಸಂಯೋಜಕ ರಂಜೀತ ಕಾಂಬಳೆ ಮಾತನಾಡಿ,ನರೇಗಾದಡಿಯಲ್ಲಿ ಪ್ರತಿಗ್ರಾಮ ಪಂಚಾಯತಿಯಲ್ಲಿ ಕಾರ್ಮಿಕರಿಗೆ ಕೂಲಿ ನೀಡಲಾಗುತ್ತಿದೆ.ಸರಕಾರ ಕಾರ್ಮಿಕರಿಗಾಗಿ ವಿಮಾ ಸೌಲಭ್ಯ ನೀಡಿದೆ.ನರೇಗಾದಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲಾರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದರು.ಗ್ರಾಮ ಪಂಚಾಯತಿ ಪಿಡಿಓಗಳು ಕೂಲಿಗಾಗಿ ಬರುವ ಜನರಿಗೆ ನರೇಗಾದ ಕೆಲಸ ಕಲ್ಪಿಸುವ ಕಾರ್ಯ ಮಾಡುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಪಿಡಿಓ ಸಂತಪ್ಪಾ ಕಟ್ಟಿಮನಿ,ರಮೇಶ ಹೂಗಾರ,ಗುಂಡು ಯಮಗಾರ,ನಿರ್ಮಲಾ ನಡುವಿನಮನಿ,ಉಪಸ್ಥಿತರಿದ್ದರು Share