ತಹಶೀಲ್ದಾರರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ತಹಶೀಲ್ದಾರರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ನಾಗನೂರ ಪಿ.ಕೆ.: ಅಕ್ರಮ ಮರಳು ಸಾಗಿಸುತ್ತಿದ್ದ ದಂಧೆಕೋರರನ್ನು ಹಿಡಿಯುವ ಸಂದರ್ಭದಲ್ಲಿ ತಹಶೀಲ್ದಾರರ ಮತ್ತು ಅವರ ವಾಹನದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ. ಸೋಮವಾರದಂದು ತಹಶೀಲ್ದಾರರಿಗೆ ಅಕ್ರಮ ಮರಳು ಸಾಗಿಸುವ ಕುರಿತು ಮಾಹಿತಿ ಲಭ್ಯವಾಗಿದೆ ಕೂಡಲೇ ತಮ್ಮ ಡ್ರೆವರ್ ನ್ನು ಕರೆದುಕೊಂಡು ಹೋದಾಗ ದಂಧೆಕೊರರು ಸಿಕ್ಕಿಬಿದ್ದಿದ್ದಾರೆ. ಅಲ್ಲಿಂದ ಪಾರಾಗಲು ದಂಧೆಕೋರರು ತಹಶೀಲ್ದಾರರ ಮೇಲೆ ಟ್ರಾಕ್ಟರ್ ಹಾಯಿಸಲು ಯತ್ನಿಸಿದ್ದಾರೆ ಅವರ ಸಹಾಯಕ್ಕೆ ಬಂದ ಡ್ರೆವರ್ ಮೇಲೆ ಟ್ರಾಕ್ಟರ್ ಹಾಯಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಇದರ ಪರಿಣಾಮವಾಗಿ ಡ್ರೆವರ್‌ನ ಪಕ್ಕೆಲುಬು ಮುರಿದಿದ್ದು ಅವನನ್ನು ಅಥಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ (ರಿ) ದಾವಣಗೆರೆ, ಅಥಣಿ ಘಟಕದ ವತಿಯಿಂದ ಹಲ್ಲೆ ಮಾಡಿದವರ ಮೇಲೆ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಡ್ರೆöÊವರ್ ತುಂಬಾ ಬಡವನಿದ್ದು ಆತನ ಆಸ್ಪತ್ರೆಯ ಬಿಲ್ಲನ್ನು ಸರ್ಕಾರವೇ ಭರಿಸಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ ಅಥಣಿ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪಿ.ಡಿ.ಬಡಿಗೇರ, ಎಮ್.ಎಮ್.ಮಿರಜಿ, ಮಲ್ಲು ಹಾರೂವಡಿ, ಮಲ್ಲು ಖಾನ, ಶೇಖ್, ಜಿ.ಎನ್.ಹಾಸಿನಕರ, ಆಯ್.ಎಸ್.ನಿಂಗವ್ವಗೋಳ ಇದ್ದರು.
Share
WhatsApp
Follow by Email