ಪತ್ರಿಕೆ ವಿತರಕರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಆರ್ಯನ್‍ ಪಾಟೀಲ್

ಪತ್ರಿಕೆ ವಿತರಕರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಆರ್ಯನ್‍ ಪಾಟೀಲ್

ಮೂಡಲಗಿ: ಇಲ್ಲಿಯ ಯುವ ವಕೀಲ ವಿನೋದ ಪಾಟೀಲ ತಮ್ಮ ಮಗ ಆರ್ಯನ್‍ನ 5ನೇ ಹುಟ್ಟುಹಬ್ಬವನ್ನು ದಿನಪತ್ರಿಕೆಗಳನ್ನು ವಿತರಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ವಿನೋದ ಮಾತನಾಡಿ ‘ಕೊರೊನಾದ ಆತಂಕ ಮತ್ತು ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸುದ್ದಿ ಪತ್ರಿಕೆಗಳನ್ನು ನಸುಕಿನಲ್ಲಿ ಮನೆಗಳಿಗೆ ತಲುಪಿಸುವ ವಿತರಕರ ಕಾರ್ಯವು ಅನನ್ಯವಾಗಿದೆ. ಅವರಿಗೆ ಉಪಹಾರದ ವ್ಯವಸ್ಥೆ ಮಾಡುವುದು ನನ್ನ ಅಳಿಲು ಸೇವೆಯಾಗಿದೆ’ ಎಂದರು.
ಬಿ.ಬಿ. ಹಂದಿಗುಂದ, ಬಾಲಶೇಖರ ಬಂದಿ, ವಿ.ಎಚ್.ಬಾಲರಡ್ಡಿ ಮಾತನಾಡಿದರು.
ಕೆ.ಬಿ. ಪಾಟೀಲ, ಬಿ.ಬಿ. ಹಂದಿಗುಂದ, ಈಶ್ವರಪ್ಪ ಸತರಡ್ಡಿ, ಬಾಬು ಸೋನವಾಲಕರ, ವಿಲಾಸ ನಾಶಿ, ಶಂಕರೆಪ್ಪ ಸೋನವಾಲಕರ, ಶಂಕರ ತಾಂವಶಿ, ಶಿವಬಸು ಚಿಪ್ಪಲಕಟ್ಟಿ, ರಮೇಶ ಮದಗನ್ನವರ, ಸೋಮಯ್ಯ ಹಿರೇಮಠ, ಮಹಾದೇವ ಮಲಗೌಡರ, ಶಂಕರ ಗುಡಗುಡಿ, ಶ್ರೀಶೈಲ್ ದೊಡಮನಿ
ದಿನಪತ್ರಿಕೆ ವಿತರಕರು ಮತ್ತು ಕಾರ್ಮಿಕರು ಸೇರಿದಂತೆ 40 ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Share
WhatsApp
Follow by Email