ಮೇ 4 ರಿಂದ ಬೆಳಗಾವಿ ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ ಉಳಿದೆಡೆ ಅಂಗಡಿಗಳು ಆರಂಭ

ಮೇ 4 ರಿಂದ ಬೆಳಗಾವಿ ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ ಉಳಿದೆಡೆ ಅಂಗಡಿಗಳು ಆರಂಭ

ಬೆಳಗಾವಿ ಜಿಲ್ಲೆ ‘ರೆಡ್ ಝೋನ್’ ಅಲ್ಲ ‘ಆರೇಂಜ್ ಝೋನ್’ ವ್ಯಾಪ್ತಿಗೆ

ಬೆಳಗಾವಿ- ಬೆಳಗಾವಿ ಜಿಲ್ಲೆ ‘ರೆಡ್ ಝೋನ್’ ಅಲ್ಲ ‘ಆರೇಂಜ್ ಝೋನ್’ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಆರೇಂಜ್ ಝೋನ್‌ಗೆ ಒಳಪಡುವ ನಿಯಮಗಳು ಬೆಳಗಾವಿಯಲ್ಲಿ ಜಾರಿಯಾಗುತ್ತವೆ ಈ ವಿಷಯ ಸೇರಿದಂತೆ ಸಿಎಂ ಜತೆ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಅನೇಕ‌‌‌ ವಿಷಯ ಚರ್ಚೆ ಮಾಡಿದ್ದೇವೆ ಬೆಳಗಾವಿ ಜಿಲ್ಲೆ ಆರೆಂಜ್‌ ಝೋನ್ ವ್ಯಾಪ್ತಿಗೆ ಬಂದಿದೆ ಎಂದರು
ಕೈಗಾರಿಕಾ ಉದ್ಯಮಗಳ ಜತೆಗೂ ಚರ್ಚೆ ಮಾಡಿದ್ದೇವೆ ಕೇಂದ್ರ ನಿರ್ದೇಶನಂತೆ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗುವುದು
ಮೇ 4ರಿಂದ ಕೇಂದ್ರ ಸರ್ಕಾರದ ಹೊಸ ನಿಯಮಗಳು ಜಾರಿಗೆ ಬರುತ್ತೆ ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್ ಸಡಿಲಿಕೆ ಮಾಡುತ್ತೇವೆ
ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಜನಸಾಮಾನ್ಯರು ಹೊರಗಡೆ ಓಡಾಡಬಾರದು ಎಂದು ಸಚಿವ ಶೆಟ್ಟರ್ ಮನವಿ ಮಾಡಿಕೊಂಡರು
ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ತಡೆಯುವಲ್ಲಿ ಯಶಸ್ವಿಯಾಗಿದೆ ಕೈಗಾರಿಕಾ ಸಂಪೂರ್ಣ ಆರಂಭವಾಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ತಾಲೂಕು ಬಿಟ್ಟು ಉಳಿದ ಕಡೆ ಸೋಂಕು ಹರಡಿಲ್ಲ,ನಿತ್ಯ ಚಟುವಟಿಕೆ ಎಂದಿನಂತೆ ನಡೆಯಬೇಕು ಕೈಗಾರಿಕಾ ಆರಂಭಿಸಲು ಅನುವು ಮಾಡಿಕೊಡುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಕಂಟೈನಮೆಂಟ್ ಝೋನ್ ಹೊರತು ಪಡಿಸಿ ಉಳಿದೆಡೆ ಅಂಗಡಿಗಳು ಆರಂಭ ಮಾಡುತ್ತೇವೆ ವ್ಯಾಪಾರ ವಹಿವಾಟು, ಕೈಗಾರಿಕೋದ್ಯಮಕ್ಕೆ ಷರತ್ತುಬದ್ಧ ಅನುಮತಿ ನೀಡುತ್ತೇವೆ ಎಂದು ಶೆಟ್ಟರ್ ಹೇಳಿದ್ರು
ಕೈಗಾರಿಕೆ ಆರಂಭಿಸಿಲು ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ ಕೈಗಾರಿಕಾ ಆರಂಭಿಸಲು ಯಾವುದೇ ಪಾಸ್ ಅವಶ್ಯಕತೆ ಇಲ್ಲ ,ಕೈಗಾರಿಕೋದ್ಯಮ ನಡೆಸುವವರು ಸೆಲ್ಫ್ ಡಿಕ್ಲೆರೇಷನ್ ಮಾಡಿ ಕೊಡಬೇಕು. ಕಟ್ಟಡ ಕಾಮಗಾರಿಗೆ ಸಹ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಮೂರು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ ಹಿರೇಬಾಗೇವಾಡಿ ಗ್ರಾಮದಲ್ಲಿ 16 ಸಾವಿರ ಜನಸಂಖ್ಯೆ ಇದೆ ಹಿರೇಬಾಗೇವಾಡಿ ಗ್ರಾಮದಲ್ಲಿ 37 ಕೇಸ್ ದಾಖಲಾಗಿದೆ .ಹಿರೇಬಾಗೇವಾಡಿಯ 600ಕ್ಕೂ ಹೆಚ್ಚು ಜನರ ಗಂಟಲು ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಹಿರೇಬಾಗೇವಾಡಿ ಗ್ರಾಮದಲ್ಲಿ ಅಗತ್ಯ ವಸ್ತುಗಳ ಪೂರೈಸಲಾಗುತ್ತಿದೆ ಬೆಳಗಾವಿಯಲ್ಲಿ ಎಲ್ಲಿಯೂ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿಲ್ಲ ಎಂದರು.
ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಹರಡಿದೆ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
Share
WhatsApp
Follow by Email