
ಶನಿವಾರದಂದು ಘಟಪ್ರಭಾ, ರಾಜಾಪೂರ, ನಾಗನೂರ, ಹಾಗೂ ಮೂಡಲಗಿ ಪಟ್ಟಣ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಬೇಟಿ ನೀಡಿ ಮಾತನಾಡಿ, ಸದರಿ ಹಂಗಾಮಿನಲ್ಲಿ ರೈತರಿಂದ ಕಳಪೆ ಬೀಜ, ರಸಗೋಬ್ಬರದ ಕೊರತೆಗಳ ಬಗ್ಗೆ ದೂರು ಬಂದಲ್ಲಿ ತಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ರಾಜಾಪೂರ ಹಾಗೂ ನಾಗನೂರ ರೈತ ಉತ್ಪಾದಕ ಸಂಸ್ಥೆಗಳಿಗೆ ಬೇಟಿ ನೀಡಿ ಕಾರ್ಯವನ್ನು ಪರಿಶೀಲಿಸಿದರು.
ಈ ಸಮಯದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶಂಕರ ಹಳದಮನಿ, ಪರಸಪ್ಪ ಹುಲಗಬಾಳಿ, ಸಹಾಯಕ ಕೃಷಿ ಅಧಿಕಾರಿ ವಿ.ಬಿ.ಬೀರಾಜ, ವಿ.ಜಿ.ಮೇತ್ರಿ, ವಿ.ಟಿ.ಸನದಿ ಹಾಗೂ ಆತ್ಮಾ ಸಿಬ್ಬಂದಿ ಪೂರ್ಣಿಮಾ ಒಡ್ರಾಳೆ ಮತ್ತಿತರರು ಇದ್ದರು.