ಗ್ರಾಮ ಪಂಚಾಯತ್ ಚುನಾವಣೆಗೂ ಕೊರೋನಾ ಕಂಟಕ..! ಮೇ ತಿಂಗಳಲ್ಲಿ ಅಂತ್ಯವಾಗುವ ಅಧಿಕಾರ | ಆಕಾಂಕ್ಷಿಗಳಲ್ಲಿ ಹೆಚ್ಚಿದ ಕಳವಳ

ಗ್ರಾಮ ಪಂಚಾಯತ್ ಚುನಾವಣೆಗೂ ಕೊರೋನಾ ಕಂಟಕ..! ಮೇ ತಿಂಗಳಲ್ಲಿ ಅಂತ್ಯವಾಗುವ ಅಧಿಕಾರ | ಆಕಾಂಕ್ಷಿಗಳಲ್ಲಿ ಹೆಚ್ಚಿದ ಕಳವಳ

ಚಿಕ್ಕಮಗಳೂರು : ಕೊರೋನಾ ಕರಿನೆರಳಿನ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆಯಬೇಕಿದ್ದ ಗ್ರಾಪಂ ಚುನಾವಣೆ ಮುಂದೂಡುವುದು ಖಚಿತಪಟ್ಟಿದೆ, ಅವಧಿಗೆ ಮರ‍್ನಾಲ್ಕು ತಿಂಗಳ ಮೊದಲೇ ಚುನಾವಣೆಯಲ್ಲಿ ಸ್ವರ್ಧಿಸಲು ಸಿದ್ದತೆ ಮಾಡಿಕೊಂಡಿದ್ದ ಆಕಾಂಕ್ಷಿಗಳಿಗೆ ಕೊರೋನಾ ಈಗ ತೀವ್ರ ನಿರಾಸೆಯನ್ನು ತಂದಿಟ್ಟಿದೆ.
ಕೆಲ ತಿಂಗಳೂ ಕಾಯಲೇ ಬೇಕು : ರಾಜ್ಯದಲ್ಲಿ ಕೊರೋನಾ ವ್ಯಾಪಿಸುತ್ತಿರುವುದನ್ನು ಗಮನಿಸಿದರೆ ಈ ವರ್ಷ ಚುನಾವಣೆ ನಡೆಯಲು ಸಾಧ್ಯವೇ ಇಲ್ಲ ಎಂದು ಚುನಾವಣಾ ಅಯೋಗದ ಸಿಬ್ಬಂದಿ ಅಭಿಪ್ರಾಯಿಸುತ್ತಾರೆ. ಇನ್ನೇನಿದ್ದರೂ 2021ನೇ ಸಾಲಿನಲ್ಲೇ ಚುನಾವಣೆ ನಡೆಸಬೇಕಾಗುತ್ತದೆ. ಈ ಕಾರಣಕ್ಕೆ ಆಕಾಂಕ್ಷಿಗಳು 8 ರಿಂದ 10ತಿಂಗಳು ಕಾಯಲೇಬೇಕಿದೆ.
ಹಾಲಿಗಳಲ್ಲಿ ಆಶಾಭಾವನೆ : ಒಂದು ವೇಳೆ ಚುನಾವಣೆ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಲ್ಲಿ ಎಲ್ಲ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕಾಗುತ್ತದೆ. ರಾಜ್ಯದ ಸಾವಿರಾರು ಪಂಚಾಯ್ತಿಗಳ ಅಧಿಕಾರಾವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಇದು ಸವಾಲಿನ ಕೆಲಸವೂ ಆಗಲಿದೆ. ಪ್ರತಿ ಪಂಚಾಯ್ತಿಗೆ ತಾಲೂಕು ಮಟ್ಟದ ಅಧಿಕಾರಿಯನ್ನೇ ಚುನಾವಣಾಧಿಕಾರಿಯನ್ನಾಗಿ ನೇಮಿಸಬೇಕಿದೆ. ಈ ಹಿನ್ನೆಯಲ್ಲಿ ಸರ್ಕಾರ ಪರ್ಯಾಯ ಮಾರ್ಗ ಹುಡುಕುವ ಸಾಧ್ಯತೆ ಇದೆ.
ನೂರಾರು ಕೋಟಿ ಬೇಕು : ಕೊರೋನಾ ಲಾಕ್ ಡೌನ್‌ನಿಂದ ಭಾರೀ ಪ್ರಮಾಣದ ಆರ್ಧಿಕ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸಹ ಸರ್ಕಾರದಲ್ಲಿ ಗಣವಿಲ್ಲ. ಇಂತಹ ರ್ಸತಿತಿಯಲ್ಲಿ ಚುನಾವಣೆ ನಡೆಸುವುದು ಸಾಮಾನ್ಯದ ಕೆಲಸವಲ್ಲ, ರಾಜ್ಯದ ಸುಮಾರು ಆರು ಸಾವಿರ ಪಂಚಾಯ್ತಿಗಳಿಗೆ ಚುನಾವಣೆ ನಡೆಸಬೇಕು ಎಂದರೆ ನೂರಾರು ಕೋಟಿ ರೂ, ವೆಚ್ಚತಗುಲುತ್ತದೆ.

ಬಾಕ್ಸ್ ನ್ಯೂಸ್ : ಲಾಕ್ ಡೌನ್ ನಡುವೆಯೂ ಕೆಲಸ ಆಕಾಂಕ್ಷಿತ ಅಭ್ಯರ್ಥಿಗಳು ಪಡಿತರ ಕಿಟ್ ವಿತರಿಸಿ ವಾರ್ಡ ವ್ಯಾಪ್ತಿಯ ಮತದಾರರ ಮನ ಗೆಲ್ಲಲು ಕಸರತ್ತು.
ಆದರೆ ಸದ್ಯದ ಸ್ಥಿತಿಯಲ್ಲಿ ಅದು ಒಂದು ವರ್ಷಕ್ಕೆ ಮುಂದೂಡಿದರೂ ಆಶ್ಚರ್ಯವಿಲ್ಲ ಎಂಬಂತಾಗಿದೆ.
Share
WhatsApp
Follow by Email