
ಬೆಳಗಾವಿ ಮಹಾನಗರ ಪ್ರವೇಶಿಸುವ ಮೊದಲು ಸಿಗುವ ಹಿರೇಬಾಗೇವಾಡಿಯಲ್ಲಿ ಇದೀಗ ಕೊರೋನಾ ಮನೆ ಮಾಡಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹತ್ತು ಜನರಿಗೆ ಕುಡಚಿ ಗ್ರಾಮದ ಓರ್ವರಿಗೆ ಸೋಂಕು ತಗುಲಿದೆ.
ಹಿರೇಬಾಗೇವಾಡಿ ಗ್ರಾಮದ ಪಿ.128 ದ್ವಿತೀಯ ಸಂಪರ್ಕಕ್ಕೆ ಬಂದ ಹತ್ತು ಜನರಿಗೆ ಕೊರೊನಾ ಸೋಂಕು ತಗುಲಿದೆ. ಹಿರೇಬಾಗೇವಾಡಿ ಜನ ಎಚ್ಚೆತ್ತುಕೊಳ್ಳದೆ ಇರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.
ಪಾದರಾಯನಪುರದಲ್ಲಿ ಮತ್ತೆ ಎರಡು ಕರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750 ಕ್ಕೆ ಏರಿದೆ. ಇಂದು ಒಂದೇ ದಿನ 45 ಹೊಸ ಕೇಸುಗಳು ದಾಖಲಾಗಿವೆ.