ತಾಲೂಕಿನಲ್ಲಿ ಸೇಡಿನ ರಾಜಕಾರಣಕ್ಕೆ ಮುನ್ನುಡಿ, ಸೇಟೆದು ನಿಲ್ಲುತ್ತಾರಾ  ಮಾಜಿ ಪ್ರತಿನಿದಿ |ಜಿದ್ದಾ ಜಿದ್ದಿನ ರಾಜಕಾರಣಕ್ಕೆ ನಾಂದಿ ಹಾಡಿದರಾ ಪ್ರತಿನಿದಿಗಳು ?

ತಾಲೂಕಿನಲ್ಲಿ ಸೇಡಿನ ರಾಜಕಾರಣಕ್ಕೆ ಮುನ್ನುಡಿ, ಸೇಟೆದು ನಿಲ್ಲುತ್ತಾರಾ ಮಾಜಿ ಪ್ರತಿನಿದಿ |ಜಿದ್ದಾ ಜಿದ್ದಿನ ರಾಜಕಾರಣಕ್ಕೆ ನಾಂದಿ ಹಾಡಿದರಾ ಪ್ರತಿನಿದಿಗಳು ?

ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೇ ವಿಶೇಷ

ಮುದ್ದೇಬಿಹಾಳ : ರಾಜಕೀಯೆಂಬ ರಣರಂಗದಲ್ಲಿ ಆರೋಪ , ಪ್ರತ್ಯಾರೋಪಗಳು ಸಹಜ. ಅಧಿಕಾರಕ್ಕಾಗಿ ಇಲ್ಲಸಲ್ಲದ ವಿರೋಧ ಪಕ್ಷದವರು ಸುದ್ದಿ ಹಬ್ಬಿಸಿ ಪ್ರಚಾರ ಗಿಟ್ಟಿಸಿಕೊಳ್ಳುವದೇನು ಹೊಸತಲ್ಲಾ ಎಂಬುವದು ಎಲ್ಲರಿಗೂ ತಿಳಿದ ವಿಷಯ. ಆದರೆ ತಾಲೂಕಿನಲ್ಲಿ ಅಚ್ಚರಿ ಪಡೆಯುವಂತಹ ಘಟನೆಗಳು ನಡೆಯುತ್ತಿದ್ದಾವೆ.

ಮತಕ್ಷೇತ್ರದ ಯಾವದೇ ಪ್ರತಿನಿಧಿಗಳಾಗಲಿ ಆಯ್ಕೇಯಾಗಿ ಅಧಿಕಾರ ಹಿಡಿದುಕೊಂಡ ಮೇಲೆ ಅವರು ಎಲ್ಲರಿಗೂ ಪ್ರತಿನಿಧಿಗಳೇ ಆದರೆ ಕೆಲವೊಮ್ಮೆ, ಮಾತಿನ ಭರದಲ್ಲಯೋ ? ಅಥವಾ ಸ್ವಇಚ್ಚಾಸಕ್ತಿ ಕೊರತೆಯೋ ? ಕೆಲವು ಜನಪ್ರತಿನಿಧಿಗಳು ಅಳಲು ಕೇಳಿಕೊಂಡು ಬಂದ ಜನರಿಗೆ ನೀನು ನನಗೆ ಮತಗಳನ್ನು ಹಾಕಿಲ್ಲಾ ಎಂದು ನಿನು ಬೇರೆ ಪಕ್ಷಗಳಿಗೆ ಮತಗಳನ್ನು ಹಾಕಿದ್ದೀಯಾ ಎನ್ನುವ ಮಾತುಗಳು ಸಾಮಾನ್ಯವಾಗಿ ಆಯ್ಕೇಯಾದ ಜನಪ್ರತಿನಿಧಿಗಳಿಂದ ಕೇಳಿಬರುತ್ತಿವೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಹೌದು ಇಂದು ಕೆಲವು ಜನಪ್ರತಿನಿದಿಗಳ ಹತ್ತಿರ ಜನಸಾಮಾನ್ಯರು ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಅವರ ಮನೆಗಳಿಗೋ ಅಥವಾ ಅವರ ಕಛೇರಿಗಳಿಗೋ ಬರುವದು ಸಾಮಾನ್ಯ ಆದರೆ ಸ್ಥಳೀಯ ಪ್ರತಿನಿದಿಗಳು ಅವರ ಬೇಡಿಕೆಗಳನ್ನು ಕೇಳಿಕೊಂಡು ಅವರಿಗೆ ಸಮಾಧಾನ ಹೇಳಿ ಅವರ ಕೆಲಸವನ್ನು ಮಾಡಬೇಕು ಅದು ಜನಪ್ರತಿನಿದಿಗಳ ಕರ್ತವ್ಯ ಕೂಡಾ ಇದೆ.
ಆದರೆ ಕೆಲವು ಜನಪ್ರತಿನಿದಿಗಳು ತಮ್ಮ ಮನೆ ಬಾಗಿಲಿಗೆ ಸಾರ್ವಜನಿಕರು ನಗರದಲ್ಲಿ ಅಥವಾ ಗ್ರಾಮೀಣ ಬಾಗಗಳಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡದೇ ಇದ್ದದ್ದರಿಂದ ತಮ್ಮ ಅಳಲನ್ನು ಹೇಳಿಕೊಳ್ಳಲು ಪ್ರತಿನಿದಿಗಳ ಹತ್ತಿರ ಬಂದು ಸರ್ ನಮ್ಮ ಮನೆಯ ಹತ್ತಿರ ಸರಿಯಾದ ರೀತಿಯಲ್ಲಿ ಕೆಲಸವಾಗಿಲ್ಲಾ ಅದನ್ನು ತಾವೂಗಳು ಸರಿ ಪಡಿಸಿರಿ ಎಂದು ಬೇಡಿಕೆ ಇಟ್ಟರೆ, ಸಮಸ್ಯೆಯನ್ನು ಬಗೇಹರಿಸುತ್ತೇನೆಂದು ಹೇಳುವದು ಎರಡನೇಯ ಮಾತು, ನನಗೆ ಬುದ್ದಿ ಹೇಳಲು ಬರಬೇಡ ಎಂದು ಬೇಡಿಕೆ ಕೇಳಲು ಬಂದ ಜನರಿಗೆ ಗದರಿಸಿ ಕಳುಹಿಸುವದು ಯಾವ ನ್ಯಾಯ ಮತ್ತು ಪ್ರತಿನಿಧಿಗಳು ಈ ರೀತಿಯಲ್ಲಿ ಮಾಡುವದು ಸರಿಯೇ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.

ಸಮಸ್ಯೇಯನ್ನು ಕೇಳುವದೇ ತಪ್ಪಾ ?
ಜನಸಾಮಾನ್ಯರ ಸಮಸ್ಯೆಗಳನ್ನು ಜನಪ್ರತಿನಿದಿಗಳು ಬಗೆಹರಿಸಬೇಕೇ ಹೊರತು, ಅವರಿಗೆ ಸಮಸ್ಯೇಯಾಗಬಾರದು ಆದರೆ ಪ್ರತಿನಿದಿಗಳೇಂದರೆ ಜನಸಾಮಾನ್ಯರಿಗೆ ಯಾವದೇ ತೊಂದರೇಯಾಗದAತೆ ನೊಡಿಕೊಂಡು, ಜನಸಾಮಾನ್ಯರು ತಮ್ಮ ಬೇಡಿಕೆಗಳನ್ನು ಕೇಳಿದರೇ ಅವರಿಗೆ ಸೂಕ್ತ ಗೌರವ, ಕೊಟ್ಟು ಪಕ್ಷ ಬೇಧಬಾವ ಮಾಡದೇ ಸಮಸ್ಯೆಗಳನ್ನು ಗೌರವಿಸಬೇಕು ಎಂಬುವದು ನಮ್ಮ ಸಂವಿದಾನ ಹೇಳುತ್ತದೆ. ಅದನ್ನು ಪಾಲಿಸುವರೂ ,ಮಾತ್ರ ಒಬ್ಬ ಉತ್ತಮ ಜನಪ್ರತಿನಿದಿಯಾಗಬಲ್ಲಾ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ ಇಲ್ಲಿ ಸಮಸ್ಯೆಗಳನ್ನು ಕೇಳುತ್ತಾ ಅಧಿಕಾರಿ ಶಾಹಿಗಳತ್ತಾ ಜನಸಾಮಾನ್ಯರು ಹೆಜ್ಜೆ ಹಾಕಿದರೆ ಯಾವದೇ ಬೇಡಿಕೆ ಈಡೇರಿಸುತ್ತಿಲ್ಲಾ, ನಿವು ನಮ್ಮ ಪಕ್ಷದವರಲ್ಲಾ ಬೇರೆ ಪಕ್ಷದವರು ಎಂದು ತಾರತಮ್ಯ ಮಾಡುತ್ತಾರೆ ಇಂತಹ ಮಲತಾಯಿ ದೋರಣೆಗೆ ಯಾರು ಹೊಣೆ ಎಂಬುವದು ಸದ್ಯ ನಾಗರಿಕರ ಆರೋಪವಾಗಿದೆ.

ಪ್ರತಿನಿದಿ ಸರ್ವಜನಸಾಮಾನ್ಯರಿಗೆ ಅಲ್ಲವೇ ?
ಒಬ್ಬ ಚುನಾವಣೆಯಲ್ಲಿ ಸ್ಪರ್ದಿಸಿ ಅಧಿಕೃತವಾಗಿ ಆಯ್ಕೇಯಾದ ನಂತರ ಆ ಜನಪ್ರತಿನಿಧಿ ಸರ್ವಜನರಿಗೂ ಮೀಸಲು, ಆ ಪಕ್ಷ, ಈ ಪಕ್ಷ ಎಂದು ಯಾವದೇ ಮಲತಾಯಿ ದೋರಣೆ ಮಾಡಕೂಡದು ಎಂದು ನಮ್ಮ ನಿಯಮ ಇದೆ. ಆದರೆ ಇದನ್ನು ಉಲ್ಲಂಘನೆಯಾದಲ್ಲಿ ಅಂತಹ ಜನಪ್ರತಿನಿದಿಗಳು ಆ ಸ್ಥಾನಕ್ಕೆ ಅನರ್ಹರು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ ಹೌದು. ಆದರೆ ಇಂದು ಪ್ರತಿನಿಧಿಗಳು ಜನಸಾಮಾನ್ಯರಿಗೆ ಕೂಗಿಗೆ ಆಸರೆಯಾಗದೇ ನೀನು ನಮ್ಮ ಪಕ್ಷದವನು ಅಲ್ಲಾ, ನಿಮಗೆ ನಾನು ಯಾವದೇ ಕೆಲಸ ಮಾಡಿ ಕೊಡುವದಿಲ್ಲಾ ಎಂದು ಇವತ್ತಿನ ಕೆಲವು ಪ್ರತಿನಿದಿಗಳು ಹೇಳುತ್ತಿರುವದು ಯಾವ ಘನಂದಾರಿ ಕೆಲಸಕ್ಕಾಗಿ, ಇವರು ಅಧಿಕಾರದ ಪ್ರಮಾಣ ವಚನ ಪಡೆಯುವ ಸಂಧರ್ಭದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಪ್ರತಿಜ್ಞೇ ಮಾಡಿದ್ದು ನೆನಪಿಲ್ಲವೇ ಎಂದು ಗ್ರಾಮೀಣ ಬಾಗದ ಜನರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮಾಜಿ ಪ್ರತಿನಿದಿಗಳು ಪ್ರತಿಭಟಿಸುತ್ತಾರಾ ?
ಮತಕ್ಷೇತ್ರದಲ್ಲಿ ಚುನಾವಣೆ ಪೂರ್ವದಲ್ಲಿ ಅಢಳಿತ, ವಿರೋಧ ಭಣಗಳ ಮಧ್ಯ ಭಾರಿ ತುರುಸಿನ ಚುನಾವಣೆ ನಡೆದು ನಾಮೇಲು ತಾಮೇಲು ಎಂದು ಕೂಗಾಡಿರುತ್ತಾರೆ. ಆದರೆ ಒಬ್ಬರು ಅಧಿಕಾರದ ಗದ್ದುಗೆ ಏರಿದ ನಂತರ ಮತಕ್ಷೇತ್ರದ ಸರ್ವಜಸಾಮಾನ್ಯರಿಗೂ ಅವರು ಪ್ರತಿನಿದಿಗಳೇ ಎಂಬುವದು ಎಲ್ಲರಿಗೂ ಗೋತ್ತಿರುವ ವಿಷಯ.ಇಲ್ಲಿ ಆಡಳಿತ ಪಕ್ಷದವರು ಸರಿಯಾದ ರೀತಿಯಲ್ಲಿ ಆಡಳಿತ ಮಾಡದೇ ಹೊದರೇ ವಿರೋಧ ಪಕ್ಷದವರು ಅವರನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ. ಮತ್ತು ಸ್ವಪಕ್ಷದವರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಮರ್ಥವಾಗಿ ಎದುರಿಸಲು ಮಾಜಿ ಪ್ರತಿನಿದಿಗಳು ಪ್ರತಿಭಟಿಸುತ್ತಾರಾ? ಎಂಬುವದು ಕಾದು ನೋಡಬೇಕಾಗಿದೆ.
ಕೋಟ್ : ಆಡಳಿತ ಪಕ್ಷದವರಿಗೆ ನಮ್ಮ ಅಳಲನ್ನು ಕೇಳಲು ಹೊದರೆ, ನಮಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲಾ , ಆಡಳಿತ ಪಕ್ಷದವರು ನಮಗೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಯುವ ಮುಖಂಡ ಅನಿಲ ನಾಯಕ ಆರೋಪಿಸಿದರು.
Share
WhatsApp
Follow by Email