ಅಂತರಾಜ್ಯದಲ್ಲಿನ ಕೂಲಿ ಕಾರ್ಮಿಕರ ಕರೆತರುವ ಕಾರ್ಯಕ್ಕೆ ಚಾಲನೇ ನೀಡಿದ್ದಕ್ಕೆ ಅಭಿನಂದನೆ

ಅಂತರಾಜ್ಯದಲ್ಲಿನ ಕೂಲಿ ಕಾರ್ಮಿಕರ ಕರೆತರುವ ಕಾರ್ಯಕ್ಕೆ ಚಾಲನೇ ನೀಡಿದ್ದಕ್ಕೆ ಅಭಿನಂದನೆ

ದ್ದೇಬಿಹಾಳ: ಸಧ್ಯ ಕೊರೊನಾ ಲಾಕ್ ಡೌನ ನಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿರುವ ಅಂತರಾಜ್ಯಗಳಲ್ಲಿ ಉದ್ಯೋಗವನ್ನು ಅರಸಿ ತೆರಳಿದ್ದ ಕಾರ್ಮಿಕರ ರಕ್ಷಣೆಗೆ ಮತ್ತು ಅವರು ತಮ್ಮ ಸ್ವಗ್ರಾಮಕ್ಕೆ ಮರಳುವಂತೆ ಮಾಡುವ ಉದ್ದೇಶದಿಂದ ಅಲ್ಲಿಂದ ಕರೆತರುವ ಕಾರ್ಯ ಮಾಡಬೇಕು ಎಂದು ಮನವಿಗೆ ಸರಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ಪಂದಿಸಿ ಅಂತರಾಜ್ಯದಲ್ಲಿನ ಕೂಲಿ ಕಾರ್ಮಿಕರ ಕರೆತರುವ ಕಾರ್ಯಕ್ಕೆ ಚಾಲನೇ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು. ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕೊರೊನಾ ಲಾಕ್ ಡೌನ ಆರಂಭದಿAದಲೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ಗೋವಾ, ಮಹಾರಾಷ್ಟç, ಆಂದ್ರ, ಕೇರಳ ಸೇರಿದಂತೆ ಇತರೇ ಅಂತರಾಜ್ಯಗಳಲ್ಲಿ ಉದ್ಯೋಗಕ್ಕೆ ವಲಸೇ ಹೊಗಿದ್ದ ಮುದ್ದೇಬಿಹಾಳ ಮತಕ್ಷೇತ್ರ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳಿಗೆ ಮರಳಬೇಕು ಎಂಬ ಉದ್ದೇಶದಿಂದ ಕಳ್ಳದಾರಿ ಮೂಲಕ ಬರುತ್ತಿದ್ದರು. ಇದರಿಂದಾಗಿ ಕೊರೊನಾ ಸೊಂಕಿತರನ್ನು ಕಂಡುಹಿಡಿಯಲು ಬಹಳ ಕಷ್ಟಪಡಬೇಕಾಗಿತ್ತಿತ್ತು. ಕಾರಣ ಸಮಾರು ಸಾವಿರಕ್ಕೂ ಹೆಚ್ಚು ಕುಟುಂಭದವರು ನನ್ನನ್ನು ಮೋಬೈಲ್ ಮೂಲಕ ಸಂಪರ್ಕಿಸಿ ನಾವಿಲ್ಲಿ ಬಹಳ ಸಂಕಷ್ಟದಲ್ಲಿದ್ದೇವೆ, ನಮ್ಮ ಮಕ್ಕಳಿಗೆ ಹಾಲು ಆಹಾರಸಿಗದೇ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಕೂಡಲೇ ನಮ್ಮನ್ನು ನಮ್ಮ ಗ್ರಾಮಗಳಿಗೆ ಬರುವಂತೆ ಬಸ್ ವ್ಯವಸ್ಥೇ ಕೈಗೊಳ್ಳಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡು ತಮ್ಮ ಅಳಲನ್ನು ತೊಂಡಿಕೊAಡಿದ್ದರು. ಈ ಹಿನ್ನೇಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚೀವೆ ಶಶಿಕಲಾ ಜೊಲ್ಲೇಯವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಒತ್ತಾಯಿಸಿದ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೇಗಳಲ್ಲಿ ವಾಸವಿದ್ದ ಸುಮಾರು 70ರಿಂದ 80 ಕೆ ಎಸ್ ಆರ್ ಟಿ ಸಿ ಬಸ್ ಗಳಮೂಲಕ 2.500 ಸಾವಿರ ವಲಸೇ ಕಾರ್ಮಿಕರನ್ನು ಕರೆತರುವ ಮೂಲಕ ಅವರ ಆರೋಗ್ಯ ರಕ್ಷಣೆ, ಕುಡಿಯುವ ನೀರು, ಊಟ ಉಪಹಾರ ನೀಡಿ ಅವರವರ ಸ್ವಗ್ರಾಮಗಳಿಗೆ ತೆರಳಿ ಅವರ ಕುಟುಂಭವನ್ನು ಸೇರುವಂತೆ ಮಾಡುವುದಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೇ ನೀಡಿ ಅವರ ಮೇಲೆ ಸೂಕ್ಷಮ ನಿಗಾವಹಿಸಲಾಗಿದೆ. ಅದರಂತೆ ಸಧ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆಯಾ ರಾಜ್ಯ ಸರಕಾರದ ಮುಖ್ಯಮಂತ್ರಿಗಳೋAದಿಗೆ ಮಾತನಾಡಿ ಕರ್ನಾಟದ ಕಾರ್ಮಿಕರನ್ನು ಕಳಿಸುವಂತೆ ಸೂಚನೆ ನೀಡಿದ್ದರಿಂದಾಗಿ ಅಂತರಾಜ್ಯದಲ್ಲಿ ಗುಳೆ ಹೋಗಿದ್ದ ಮುಖ್ಯವಾಗಿ ಗೋವಾ ಹಾಗೂ ಮಹಾರಾಷ್ಟçದಿಂದ ಮುದ್ದೇಬಿಹಾಳ ಮತಕ್ಷೇತ್ರದ ಸುಮಾರು 4ರಿಂದ 5 ಸಾವಿರ ಕಾರ್ಮಿಕರು ವಾಪಸ್ ತವರಿಗೆ ಬರುವ ಎಲ್ಲ ಸಿದ್ದತೆ ಕಾರ್ಯಕೈಗೊಳ್ಳಲಾಗಿದೆ. ಈ ವೇಳೆ ಬರವ ಕಾರ್ಮಿಕರು ಯಾವ ರಾಜ್ಯದಿಂದ ಯಾವ ಝೋನ್ ನಿಂದ ಬರಲಿದ್ದಾರೆ ಎಂಬುದನ್ನು ಸಂಪೂರ್ಣ ಮಾಹಿತಿ ಪಡೆದು ಅವರ ಆರೋಗ್ಯ ತಪಾಸಣೆ ಜೊತೆ ಬರುವಂತಹ ಎಲ್ಲ ಕಾರ್ಮಿಕರಿಗೂ ಥರ್ಮಲ್ ಸ್ಕಾö್ಯನ್ ತಪಾಸಣೆ ನಡೆಸಲಾಗುತ್ತದೆ. ಜೊತೆಗೆ ಬಂದಿರುವ ಎಲ್ಲ ಕಾರ್ಮಿಕರಿಗೂ ಕುಡಿಯುವ ನೀರು, ಉಪಹಾರ, ಊಟ, ಹಾಗೂ ಎಲ್ಲರಂತೆ ದಿನಸಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುವುದು ಎಂದರು. ಈ ವೇಳೆ ತಹಶಿಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ಡಿ ಸಿಸಿ ಬ್ಯಾಂಕ ನಿರ್ಧೇಶಕ ಸೋಮನಗೌಡ ಬಿರಾದಾರ, ಗಣ್ಯರಾದ ಮನೋಹರ ತುಪ್ಪದ, ಬಸವರಾಜ ಗುಳಬಾಳ ಸೇರಿದಂತೆ ಹಲವುರು ಉಪಸ್ಥಿತರಿದ್ದರು.</div>
Share
WhatsApp
Follow by Email