ಸವದತ್ತಿ: ಲಾಕ್ಡೌನ್ದಿಂದ ಸರಕಾರ 1610 ಕೋಟಿ ನೆರವು ನೀಡಿದೆ. ಇದು ಸ್ವಾಗತಾರ್ಹ. ಆದರೆ ಕೂಲಿಕಾರರ ಜೊತೆಗೆ ಪರಣಾಮಕಾರಿಯಾಗಿ ತೊಂದರೆಗೆ ಸಿಲುಕಿರುವ ಎಲ್ಲ ವರ್ಗದ ಕುಶಲಕಾರ್ಮಿಕರನ್ನು ನಿರ್ಲಕ್ಷಿಸಿದ್ದು ಅಕ್ಷಮ್ಯ ಕೂಡ. ಕಾರಣ ಎಸ್.ಸಿ/ಎಸ್,ಟಿ ಸೇರಿದಂತೆ ಎಲ್ಲ ಸಮುದಾಯಗಳಿಗೂ ಅನ್ವಯವಾಗುವಂತೆ ನೆರವು ಹಂಚಿಕೆಮಾಡಬೇಕೆoದು ಶಿವಶರಣ ಸಮಗಾರ ಹರಳಯ್ಯ ಸಮಾಜ ಸೇವಾ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳಿಂದ ಗುರುವಾರ ಮಿನಿವಿಧಾನ ಸೌಧದಲ್ಲಿ ತಹಶೀಲ್ದಾರ ಮೂಲಕ ಸಿಎಮ್ ಯಡಿಯೂಪ್ಪಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ ಸಮಗಾರ, ಚಮ್ಮಾರ, ಡೋರ, ಚಲವಾದಿ, ಮಾದಿಗ ಸಮಾಜ ಸೇರಿದಂತೆ ಇತರೆ ಹಿಂದುಳಿದ ಕುಶಲಕರ್ಮಿಗಳು ಬಿಸಿಲು ಮಳೆ ಲೆಕ್ಕಿಸದೇ ರಸ್ತೆ ಬದಿ ಕುಳಿತು ಚರ್ಮ ಹದ ಮಾಡುವ, ಸತ್ತ ದನಗಳ ಚರ್ಮ ಸುಲಿಯುವ ಹಾಗೂ ಚಪ್ಪಲಿ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ಚಪ್ಪಲಿ ಉದ್ಯೋಗದಲ್ಲಿ ತೊಡಗಿ ಸಾರ್ವಜನಿಕರ ಸೇವೆಯಲ್ಲಿದ್ದ ನಮಗೂ ನಮ್ಮ ಸಮಾಜಕ್ಕೂ ನೆರವು ನೀಡಬೇಕೆಂದು ಲಿಖಿತ ಮೂಲಕ ಸಲ್ಲಿಸಲಾಯಿತು. ಈ ವೇಳೆ ಹರಳಯ್ಯ ಸಮಾಜದ ಅಧ್ಯಕ್ಷ ಅಣ್ಣಪ್ಪ ಹೊಂಗಲ, ಮಹೇಶ ಬೇಲೀಫ, ಸುಧಾಕರ ಕೌಜಲಗಿ, ಕುಮಾರ ರಾಮದುರ್ಗ, ಡಿಎಸ್ಎಸ್ ಮುಖ್ಯಸ್ಥರಾದ ರವಿ ದೊಡಮನಿ, ಯಲ್ಲಮ್ಮ ಗೊರವನಕೊಳ್ಳ, ಯಲ್ಲಮ್ಮ ಕಾಳಪ್ಪನವರ ಹಾಗೂ ಪ್ರಮುಖರು ಇದ್ದರು