
ಸಮೀಪದ ಕುಲಹಳ್ಳಿ ಗ್ರಾಮದ ಕಲ್ಲಪ್ಪ ಕಂಕಣವಾಡಿಯವರ ದೂರಿನನ್ವಯ ಈರಪ್ಪ ತಂಬಾಕು ಎಂಬುವರ ಕಬ್ಬಿನ ಹೊಲದಲ್ಲಿ ಗುರುವಾರ ಕಂಠಪೂರ್ತಿ ಕುಡಿದು ಬೇಕಾಬಿಟ್ಟಿಯಾಗಿ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿಯವರನ್ನು ಹಾಗೂ ಬಿಜೆಪಿ ಪಕ್ಷದ ಮುಖಂಡರನ್ನು ಅಶ್ಲೀಲವಾಗಿ ಬೈದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಐವರು, ಕುಲಹಳ್ಳಿ ಗ್ರಾಮದವರಾದ ರಮೇಶ ತೇಲಿ, ರಂಜಾನ್ ಕಾಲೇಖಾನ್, ಲಾಲಸಾಬ್ ಸಂತಿ, ಮಲ್ಲಯ್ಯ ಅವರಖೋಡ, ಬನಹಟ್ಟಿಯ ಸೀಮಂತ ಜಗದಾಳರನ್ನು ಬಂಧಿಸಿದ್ದಾರೆ. ಈ ಕುರಿತು ಬನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ತನಿಖೆ ಮುಂದುವರೆಸಿದ್ದಾರೆ.