ಜನ್ಮ ದಿನಾಚರಣೆಯನ್ನು ಬಡ ರೋಗಿಗಳಿಗೆ  ಹಣ್ಣುಗಳನ್ನು ಹಂಚುವ ಮೂಲಕ ಆಚರಣೆ

ಜನ್ಮ ದಿನಾಚರಣೆಯನ್ನು ಬಡ ರೋಗಿಗಳಿಗೆ ಹಣ್ಣುಗಳನ್ನು ಹಂಚುವ ಮೂಲಕ ಆಚರಣೆ

ಮೂಡಲಗಿ; ಜನ ಸೇವಾ ಕಾರ್ಯದಲ್ಲಿ ನಿರತರಾದವರಿಗೆ ಅನೇಕ ವಿಘ್ನಗಳು ಅನಿವಾರ್ಯ ಅಂತಹ ಪರಿಸ್ಥಿತಿಯಲ್ಲಿ ತಮ್ಮದೆ ಯಾದ ಶೈಲಿಯಲ್ಲಿ ಜನತಾ ಸೇವೆ ಬಹು ಮುಖ್ಯವಾದದ್ದು ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹೇಳಿದರು.
ಅವರು ರವಿವಾರ ಜರುಗಿದ ಮಾಜಿ ಜಿಪಂ ಸದಸ್ಯ, ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ನಿರ್ಧೇಶಕರ ಜನ್ಮದಿನದ ಪ್ರಯುಕ್ತ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕೆಮ್‍ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಾಗಿದೆ. ಭೀಮಶಿ ಮಗದುಮ ಕ್ಷೇತ್ರದಲ್ಲಿ ಜನಾನುರಾಗಿ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಕ್ಷೇತ್ರದ ಜನತೆಗೆ ಅನುಕೂಲ ಮಾಡಿದ್ದಾರೆ. ಮಹಾಮಾರಿ ಕೊರೋನಾದಿಂದಾದ ಅವರ ಜನ್ಮದಿನಾಚರಣೆಯನ್ನು ಬಡರೋಗಿಗಳ ಜೋತೆ ಹಂಚಿಕೊಂಡಿರುವದು ಮೆಚ್ಚುಗೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಜಯ ಸೋನವಾಲಕರ, ಡಾ. ಭಾರತಿ ಕೋಣಿ, ಪುರಸಭೆ ಸದಸ್ಯ ಹಣಮಂತ ಗುಡ್ಲಮನಿ, ಹೇಸ್ಕಾಮ್‍ನ ಶಿವಲಿಂಗ ಯಳ್ಳೂರ, ಸಂತೋಷ ಕಮತಿ, ಬಸು ಲಂಗೋಟಿ, ಸುಭಾಸ್ ಭಜಂತ್ರಿ ಹಾಗೂ ಆಸ್ಪತ್ರೆ ಕಾರ್ಯಕತರ್ರು ಉಪಸ್ಥಿತರಿದ್ದರು.
Share
WhatsApp
Follow by Email