ರಸ್ತೆ ಅಪಘಾತ: ಎಎಸೈ ಸಾವು ಸಾಂತ್ವನ ಹೇಳಿದ ಮಾಮನಿ, ಸರಕಾರದ ಸೌಲಬ್ಯಗಳ ಭರವಸೆ

ರಸ್ತೆ ಅಪಘಾತ: ಎಎಸೈ ಸಾವು ಸಾಂತ್ವನ ಹೇಳಿದ ಮಾಮನಿ, ಸರಕಾರದ ಸೌಲಬ್ಯಗಳ ಭರವಸೆ

ಸವದತ್ತಿ: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ನಡೆಸುತ್ತಿದ್ದ ಎ.ಎಸ್.ಐ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ.
ಪಟ್ಟಣದ ಹೊರ ವಲಯದ ನಿಕ್ಕಮ್ ಕಲ್ಯಾಣ ಮಂಟಪದ ಹÀತ್ತಿರ ಶನಿವಾರ ರಾತ್ರಿ 9ರ ವೇಳೆ ಕರ್ತವ್ಯ ಮುಗಿಸಿ ಸ್ವಗ್ರಾಮ ಬೈಲಹೊಂಗಲದ ಅನಿಗೋಳಕ್ಕೆ ತೆgಳುವಾಗ ಸವದತ್ತಿ ಠಾಣೆಯ ಎ.ಎಸ್.ಐ ಯಲ್ಲಪ್ಪ ಆರ್ ತಳವಾರ (59) ಅಪಘಾತದಲ್ಲಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಆದರೆ ಡಿಕ್ಕಿ ಹೊಡೆದ ವಾಹನ ಯಾವುದೆಂದು ಇನ್ನೂ ತಿಳಿದು ಬಂದಿಲ್ಲ.
ಮೂಲತಃ ಇವರು ಬೈಲಹೊಂಗಲ ತಾಲೂಕಿನ ಅನಿಗೋಳ ನಿವಾಸಿ. ಸವದತ್ತಿ ಠಾಣೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಇವರು ಸದ್ಯ ಇನ್ನೆರಡು ತಿಂಗಳಲ್ಲಿ ನಿವೃತ್ತಿಯಾಗುವವರಿದ್ದರು. ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್ ಇಲಾಖೆ ಅಪಘಾತ ಮಾಡಿದ ವಾಹನದ ತೀವ್ರ ಶೋಧ ಕಾರ್ಯ ನಡೆಸಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಎ.ಎಸ್.ಐ ಯಲ್ಲಪ್ಪ ತಳವಾರ ಅವರ ಮನೆಗೆ ರವಿವಾರ ಬೇಟಿ ನೀಡಿದ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ಸರಕಾರದಿಂದ ನೀಡಲಾಗುವ ಎಲ್ಲ ಸೌಲಬ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
Share
WhatsApp
Follow by Email