ಮುಂಗಾರು ಹಂಗಾಮಿಗೆ ರಿಯಾಯತಿ ಬಿತ್ತನೆ ಬೀಜ

ಮುಂಗಾರು ಹಂಗಾಮಿಗೆ ರಿಯಾಯತಿ ಬಿತ್ತನೆ ಬೀಜ

ಬೆಳಗಾವಿ: ಬೆಳಗಾವಿ ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ರಿಯಾಯತಿ ಅಡಿ ಬಿತ್ತನೆ ಬೀಜ, ಕೃಷಿ ಪರಿಕರ ಹಂಚಲು ಹಂಗಾಮಿಗೆ ಮುಂಚಿತವಾಗಿ ವ್ಯವಸ್ಧೆ ಮಾಡಲಾಗುತ್ತಿದೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಜಿ.ಬಿ.ಕಲ್ಯಾಣಿ ತಿಳಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳಾದ ಕಾಕತಿ, ಉಚಗಾಂವ, ಹಿರೇಬಾಗೇವಾಡಿ ಹಾಗೂ ಹೆಚ್ಚುವರಿಯಾಗಿ ಪಿ.ಕೆ.ಪಿ.ಎಸ್. ಸಂಘಗಳಾದ ನಂದಿಹಳ್ಳಿ, ಬೆಳಗುಂದಿ, ಮಾರೀಹಾಳ, ಮುತ್ನಾಳ, ಮೋದಗಾ, ಹಲಗಾ, ಬೆಂಡಿಗೇರಿ, ಕೆ.ಕೆ.ಕೊಪ್ಪ, ಬಡಾಲ ಅಂಕಲಗಿಗಳಲ್ಲಿ ರಿಯಾಯತಿ ಬಿತ್ತನೆ ನೀಜ ವಿತರಿಸಲು ವ್ಯವಸ್ಧೆ ಮಾಡಲಾಗಿದ್ದು, ರೈತರು ತಮ್ಮ ದಾಖಲೆಗಳನ್ನು ಒದಗಿಸಿ ಬೀಜ ಪಡೆಯಬಹುದಾಗಿದೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 48,500 ಹೆಕ್ಟರ್ ಕ್ಷೇತ್ರ ಬಿತ್ತನೆ ಗುರಿ ಹೊಂದಲಾಗಿದೆ. ಅವುಗಳ ಪೈಕಿ ಪ್ರಮುಖ ಬೆಳೆಗಳಾದ ಭತ್ತ 25,000 ಹೆಕ್ಟರ್, ಸೋಯಾಬೀನ 9,000 ಹೆಕ್ಟರ್, ಕಬ್ಬು 9,000 ಹೆಕ್ಟರ್ ಗುರಿ ಹೊಂದಲಾಗಿದೆ.
ವಿವಿಧ ತಳಿಗಳಾದ ಜಯಾ, ಐ.ಆರ್-64, ಇಂಟಾನ ಇತರೆ ಬೀಜ 100 ಕ್ವಿಂಟಲ್ ಹಾಗೂ ಸೋಯಾಬೀನ 3,000 ಕ್ವಿಂಟಲ್‌ನಷ್ಟು ಹಂಚಿಕೆಯ ಗುರಿ ಇಟ್ಟುಕೊಳ್ಳಲಾಗಿದ್ದು, ದಾಸ್ತಾನು ಪ್ರಾರಂಭಿಸಲಾಗಿದೆ.
ರೈತರು ತಾವು ಬಿತ್ತುವ ಪೂರ್ವ ತಮ್ಮ ಹಂತದಲ್ಲಿ ಮೊಳಕೆ ಪ್ರಮಾಣ ಪರೀಕ್ಷಿಸಿ ಬಿತ್ತನೆ ಕೈಗೊಳ್ಳಲು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಜಿ.ಬಿ.ಕಲ್ಯಾಣಿ ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Share
WhatsApp
Follow by Email