ಕೊರೋನಾ ಹಿನ್ನೆಲೆ ಕಾರ್ಮಿಕರ ಪರಸ್ಥಿತಿ ಚಿಂತಾಜನಕ : ಬಸವರಾಜ್ ಹತ್ತರಕಿ

ಕೊರೋನಾ ಹಿನ್ನೆಲೆ ಕಾರ್ಮಿಕರ ಪರಸ್ಥಿತಿ ಚಿಂತಾಜನಕ : ಬಸವರಾಜ್ ಹತ್ತರಕಿ

ಗೋಕಾಕ : ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವೃತ್ತಿಪರ ಶಾಮಿಯಾನ, ಸೌಂಡ್ ಮತ್ತು ಡೆಕೋರೇಟರ್ಸ ಮಾಲೀಕರು ಮತ್ತು ಕಾರ್ಮಿಕರಿಗೆ ಅಗತ್ಯ ನೆರವು ನೀಡುವಂತೆ ಆಗ್ರಹಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಸವರಾಜ ಹತ್ತರಕಿ ಅವರು ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹತ್ತರಕಿ ಅವರು, ಲಾಕಡೌನ್‍ದಿಂದ ಮದುವೆ, ಸಭೆ-ಸಮಾರಂಭಗಳು ನಡೆಯುತ್ತಿಲ್ಲ. ಮಾಲೀಕರು ಮತ್ತು ಕಾರ್ಮಿಕರು ಕೈಯಲ್ಲಿ ಕೆಲಸವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಶಾಮಿಯಾನ ಖರೀದಿಸುವ ಸಂಬಂಧ ಸಹಕಾರಿ ಬ್ಯಾಂಕು ಹಾಗೂ ಇತರೇ ಮೂಲಗಳಿಂದ ಸಾಲ ಪಡೆಯಲಾಗಿದ್ದು, ಅದನ್ನು ಈಗಿನ ಸಂದರ್ಭದಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಶಾಮಿಯಾನ ಮತ್ತೀತರ ಬಳಕೆ ಸಾಮಗ್ರಿಗಳನ್ನು ಒಂದೆಡೆ ಶೇಖರಿಸಿಡಲು ಮಾಲೀಕರು ಗೋಡಾವನ್‍ಗಳನ್ನು ಬಾಡಿಗೆಗೆ ಪಡೆದಿದ್ದು, ಅದನ್ನು ಸಹ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕ ಮತ್ತು ಮಾನಸಿಕವಾಗಿ ನೊಂದಿದ್ದೇವೆ. ವರ್ಷದಲ್ಲಿ 6 ತಿಂಗಳವರೆಗೆ ಮಾತ್ರ ನಮ್ಮ ಕೆಲಸ ನಡೆಯುತ್ತಿದ್ದು 1200 ಕಾರ್ಮಿಕರು ಮತ್ತು 200 ಜನ ಮಾಲೀಕರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು, ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದು ಸಂಘದವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಸವರಾಜ ಅಂಬನ್ನವರ, ವಿಠ್ಠಲ ಸೂರ್ಯವಂಶಿ, ಆನಂದ ಹಟ್ಟಿಗೌಡರ, ಬಸವರಾಜ ಎಮ್ಮಿ, ಸದಸ್ಯರಾದ ಮುಜಮೀಲ ಕುರಬೇಟ, ಜಾವೀದ ಪಟೇಲ, ಅರ್ಜುನ ನಾರ್ಶಿ, ಗಿರಿಯಪ್ಪ ದುರದುಂಡಿ, ಗಿರೆಪ್ಪ ಶಿಂಗೋಟಿ, ಮಾರುತಿ ಚಿಪ್ಪಲಕಟ್ಟಿ, ಶಂಕರ ಬಿಳ್ಳೂರ, ಕರೆಪ್ಪ ನಂದಿ, ರಂಗಪ್ಪ ನಿಂಗನ್ನವರ, ಮಲ್ಲಿಕ ರಾಜಾಪೂರ, ಲಕ್ಕಪ್ಪ ಹಾದಿಮನಿ, ಮಹೆಬೂಬ ಸೈಯ್ಯದ, ರಾಜು ಫನಿಬಂದ, ಶಹಬಾಜ ಖಾಜಿ, ಹನಮಂತಪ್ಪ ದಳವಾಯಿ ಉಪಸ್ಥಿತರಿದ್ದರು.
Share
WhatsApp
Follow by Email