
ಇಂದು ದಾವಣಗೆರೆಯಲ್ಲಿ ಮೂವರಿಗೆ, ಮಂಡ್ಯದಲ್ಲಿ ನಾಲ್ವರಿಗೆ, ಬೆಂಗಳೂರು ನಗರದಲ್ಲಿ ಐವರಿಗೆ, ಗದಗ ಜಿಲ್ಲೆಯಲ್ಲಿ ನಾಲ್ವರಿಗೆ, ಬೆಳಗಾವಿಯಲ್ಲಿ ಒಬ್ಬರಿಗೆ, ಬಾಗಲಕೋಟೆಯಲ್ಲಿ ಒಬ್ಬರಿಗೆ ಮತ್ತು ಬೀದರ್ ನಲ್ಲಿ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಇನ್ನೂ ಕಿಲ್ಲರ್ ಕೊರೋನಾಗೆ ಇಂದು ಇಬ್ಬರು ಬಲಿಯಾಗುವ ಮೂಲಕ, ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಇನ್ನೂ ಸೋಂಕಿತರಾದಂತ 456 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.