ಡಾಂಗೆ ಕುಟುಂಬದಿಂದ ಕೊರೋನಾ ವಾರಿಯರ್ಸಗೆ ಸನ್ಮಾನ

ಡಾಂಗೆ ಕುಟುಂಬದಿಂದ ಕೊರೋನಾ ವಾರಿಯರ್ಸಗೆ ಸನ್ಮಾನ

ಮೂಡಲಗಿ: ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಮಾರಕ ಕೊರೋನಾ ವೈರಸ್ ಸೊಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಇಲ್ಲಿಯ 7ನೇ ವಾರ್ಡಿನಲ್ಲಿ ನಜ್ಮಾ ಡಾಂಗೆ ಮತ್ತು ಹಸನಸಾಬ ಡಾಂಗೆ ಅವರು ಸತ್ಕರಿಸಿ ಗೌರವಿಸಿದರು.
ಸುಮಿತ್ರಾ ಸೋನವಾಲ್ಕರ ಮಾತನಾಡಿ, ಕೊರೋನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸುವಿಕೆ ಮದ್ದು, ರೋಗ ನಿರೋದಕ ಶಕ್ತಿಯ ಆಹಾರ ಪದಾರ್ಥಗಳನ್ನು ಬಳಸುವುದೆ ಇದಕ್ಕೆ ಔಷದಿ ಆಗಿದೆ. ಕೊರೋನಾ ರೋಗ ಹರಡದಂತೆ ಆಶಾ, ಅಂಗನವಾಡಿ ಸಿಬ್ಬಂದಿ ಮಹತ್ವದ ಕಾರ್ಯ ನಿರ್ವಸಿದ್ದಾರೆ ಎಂದರು.
ಸತ್ಕಾರ ಸ್ವೀಕರಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷಿö್ಮÃ ಶೇರೆಗಾರ, ಬಿ.ಬಿ.ಆಯೋಶಾ ಡಾಂಗೆ, ವಿಜಲಕ್ಷಿö್ಮÃ ರೆಳೇಕರ, ರೇಣುಕಾ ನಾಶಿ ಮಾತನಾಡಿ, ನಮ್ಮ ಸೇವೆ ಗುರುತಿಸಿ ಸನ್ಮಾನಿಸುತ್ತಿರುವುದು ನಮಗೆ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
ದಸ್ತಗೀರಸಾಬ ಡಾಂಗೆ, ನಜ್ಮಾ ಡಾಂಗೆ, ಹಸನಸಾಬ ಡಾಂಗೆ ಅಸ್ಲಂ ಕುರಬೇಟ, ಮೌಲಾನಬಿ ಡಾಂಗೆ, ಪುರಸಣೆ ಸದಸ್ಯ ಅಬಲ್ದುಗಫಾರ ಡಾಂಗೆ, ಯಲ್ಲಪ್ಪ ಕುಂಬಾರ, ಸುಮಿತ್ರಾ ಸೋನವಾಲ್ಕರ, ಸುನೀತಾ ಸೋನವಾಲ್ಕರ, ವಿಜಯಲಕ್ಷಿö್ಮÃ ತೇಲಿ, ಲಲಿತಾ ಬೆಳಕುಡ, ರಿಯಾನಾ ಅಡಿಹುಡಿ ಮತ್ತಿತರರು ಇದ್ದರು.
Share
WhatsApp
Follow by Email