ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಮನವಿ

ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಮನವಿ

ಅಥಣಿ : ಕೊರೋನಾ ಮಹಾಮಾರಿಯಿಂದ ದೇಶ ಲಾಕ್ ಡೌನ್ ಆಗಿದ್ದರಿಂದ ಬಡ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳು ಚರ್ಮದ ಪಾದರಕ್ಷೆಗಳ ಸಣ್ಣಪುಟ್ಟ ಅಂಗಡಿಕಾರರು, ಬೀದಿ ಪಾದರಕ್ಷೆಗಳ ಮಾರಾಟಗಾರರು, ಬೀದಿ ಬದಿಯ ಅಂಗಡಿಕಾರರು, ಚರ್ಮದ ಉದ್ಯಮಿಯ ಕೂಲಿಕಾರರು ಮತ್ತು ಪಾದರಕ್ಷೆಗಳ ತಯಾರಕರ ಜೀವನವು ತತ್ತರಿಸಿ ಹೋಗಿದೆ. ಬದುಕಲು ಅವರ ಜೀವನೋಪಾಯಕ್ಕಾಗಿ ವಿಶೇಷ ಪ್ಯಾಕೇಜ್ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ರಾಜ್ಯ ಶಿವಶರಣ ಹರಳಯ್ಯಾ ಸಮಾಜ ದಲಿತ ವೇದಿಕೆ (ರಿ). ರಾಜ್ಯಾಧ್ಯಕ್ಷ ಅನಿಲ ಸೌದಾಗರ ಪತ್ರದ ಮುಖೇನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಹರಡದಂತೆ ತಡೆಯಲು 52 ದಿನಗಳಿಂದ ದೇಶ ಲಾಕ್ ಡೌನ್ ಆಗಿದ್ದರಿಂದ ಪರಿಶಿಷ್ಟ ಜಾತಿಯ ಪಂಗಡಕ್ಕೆ ಸೇರಿದ ನಮ್ಮ ಜನಾಂಗವು ಸಮಗಾರ, ಚಮ್ಮಾರ,ಮಚಗಾರ, ಮೋಚಿ, ರೋಹಿದಾಸಿ, ಹಾಗೂ ಡೋರ್ ಹಾಗೂ ಮಾದಿಗ ಜನಾಂಗಕ್ಕೆ ಸೇರಿದ್ದು ಕರ್ನಾಟಕ ರಾಜ್ಯದಲ್ಲಿ ಸುಮಾರು 54 ಲಕ್ಷ ಜನರಿದ್ದು ಅದರಲ್ಲಿ ಕರಕುಶಲಕರ್ಮಿಗಳು ಸುಮಾರು 10 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಚರ್ಮ ಉದ್ಯೋಗವನ್ನೇ ತಮ್ಮ ಕೌಟುಂಬಿಕ ಉದ್ಯೋಗವನ್ನಾಗಿ ಮಾಡಿಕೊಂಡಿದ್ದು ಇವರ ಜೀವನವು ಕೊರೋನಾ ಎಂಬ ಮಹಾಮಾರಿಯಿಂದ ತತ್ತರಿಸಿಹೋಗಿದೆ. ಒಂದು ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದ್ದು ಕೆಲಸವಿಲ್ಲದೆ, ಉದ್ಯೋಗ ಇಲ್ಲದೆ ಯಾವುದೇ ಅನುಕೂಲತೆಗಳು ಆಗದೆ ಬೀದಿಪಾಲಾಗುವ ಪರಿಸ್ಥಿತಿ ಉದ್ಭವವಾಗಿದೆ. ಇವರ ಉಪಜೀವನಕ್ಕಾಗಿ ಸರಕಾರದಿಂದ ಸಹಾಯ ಸೌಲಭ್ಯದ ಅವಶ್ಯಕತೆ ಇದೆ ಎಂದು ರಾಜ್ಯಾಧ್ಯಕ್ಷ ಡಾ, ಅನಿಲ ಸೌದಾಗರ ಮುಖ್ಯಮಂತ್ರಿ ಬಿಎಸ್ . ಯಡಿಯೂರಪ್ಪ ಅವರಿಗೆ ಬರೆದ ಮನವಿಯಲ್ಲಿ ತಮ್ಮ ಜನಾಂಗದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ.
12ನೇ ಶತಮಾನದಿಂದ ಶಿವಶರಣ ಹರಳಯ್ಯನವರ ಕುಲದವರಾದ ನಾವುಗಳು ಪಾದರಕ್ಷೆ ಮಾಡಿಕೊಂಡು ಜೀವನ ನಡೆಸುತ್ತಾ ಬಂದಿದ್ದು ಚರ್ಮೋದ್ಯಮ ನಮ್ಮ ಜನಾಂಗದ ಕುಲಕಸುಬು ಆಗಿರುತ್ತದೆ. ನಮ್ಮ ಚರ್ಮ ಉದ್ಯೋಗವು ಗುಡಿಕೈಗಾರಿಕೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೇಂದ್ರ ಸರ್ಕಾರದ ಜವಳಿ ಉದ್ಯಮಿ (ಹ್ಯಾಂಡಿ ಕ್ರಾಫ್ಟ್ ) ಅಡಿಯಲ್ಲಿ ಬರುವ ಈ ಉದ್ಯೋಗವು ಕೌಟುಂಬಿಕ ಉದ್ಯೋಗ ಆಗಿರುತ್ತದೆ ಆದರೆ ಮುಖ್ಯಮಂತ್ರಿ ಬಿಎಸ, ಯಡಿಯೂರಪ್ಪನವರು ಕೊರೋನಾ ಮಹಾಮಾರಿಗೆ 1610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜನ್ನು ಪುನರುಜ್ಜೀವನಕ್ಕಾಗಿ ಘೋಷಿಸಿರುತ್ತಾರೆ ಅದರಲ್ಲಿ ನಮ್ಮ ಜನಾಂಗಕ್ಕೆ ಇಲ್ಲಿವರೆಗೆ ಯಾವುದೇ ಪ್ಯಾಕೇಜ್ ಸಿಕ್ಕಿರುವುದಿಲ್ಲ ಆದ್ದರಿಂದ ದಯಮಾಡಿ ನಮ್ಮ ಈ ಜನಾಂಗಕ್ಕೆ ಸುಮಾರು 1, 5 ಲಕ್ಷ ಚರ್ಮ ಕುಶಲಕರ್ಮಿಗಳಿಗೆ ಬೀದಿ ಪಾದರಕ್ಷೆಗಳ ವ್ಯಾಪಾರಸ್ಥರಿಗೆ ಮತ್ತು ಸಣ್ಣಪುಟ್ಟ ಅಂಗಡಿಕಾರರಿಗೆ ಉದ್ಯಮಿಯ ಕಾರ್ಮಿಕರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಹಾಯಧನ ಮಂಜೂರಾತಿ ನೀಡಿ ಅವರ ಜೀವನವನ್ನು ರಕ್ಷಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಶಿವಾನಂದ ಸೌದಾಗರ,ಸುಂದರ ಸೌದಾಗರ, ,ಸಂಜು ರಾಯಬಾಗಕರ್,ಜಯವಂತಿ ಸಂಕಪ್ಪಾಳ,ದಿಲೀಪ ಕಾಂಬಳೆ,ವಿಲಿನರಾಜ ಯಳಮಲ್ಲಿ,ರಾಜೇಂದ್ರ ಐಹೊಳೆ,ಇನ್ನೂ ಹಲವರು ಉಪಸ್ಥಿತರಿದ್ದರು
Share
WhatsApp
Follow by Email