ಮೃತ ಲಕ್ಕಪ್ಪ ದೊಡ್ಡಮನಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಿಂದ ಸಾಂತ್ವನ ಧನ ಸಹಾಯ, ದಿನಸಿ ಸಾಮಗ್ರಿ ನೀಡಿದ  ರೈತ ಮುಖಂಡರು

ಮೃತ ಲಕ್ಕಪ್ಪ ದೊಡ್ಡಮನಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಿಂದ ಸಾಂತ್ವನ ಧನ ಸಹಾಯ, ದಿನಸಿ ಸಾಮಗ್ರಿ ನೀಡಿದ ರೈತ ಮುಖಂಡರು

ಮುಗಳಖೋಡ: ಸಮೀಪದ ಸುಲ್ತಾನಪೂರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡ್ಡಮನಿ ಎಂಬ 38 ವರ್ಷದ ರೈತ ಸೋಮವಾರ ದಿ: 11 ರಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿತ್ತು. ಈ ಘಟನೆಯ ಸುದ್ದಿ ತಿಳಿದು ಶುಕ್ರವಾರ 15ರಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜೇರಿ ಹಾಗೂ ಮುಖಂಡರು ಸುಮಾರು 25 ಕ್ಕೂ ಹೆಚ್ಚು ಪದಾಧಿಕಾರಿಗಳು ಮೃತ ರೈತ ಲಕ್ಕಪ್ಪ ದೊಡ್ಡಮನಿ ಅವರ ಕುಟುಂಬಕ್ಕೆ ತಮ್ಮ ಹತ್ತಿರವಿದ್ದ ಹಣವನ್ನು ಕೂಡಿಸಿ 5000 ರೂ ಧನ ಸಹಾಯ, ದಿನಸಿ ಕಿಟ್ಟ್ ನೀಡಿ ಸಾಂತ್ವನ ಹೇಳಿದರು.
ಸುಲ್ತಾನಪೂರದ ದೊಡ್ಡಮನಿ ಅವರ ಬಡಕುಟುಂಬ ಇವತ್ತು ಲಕ್ಕಪ್ಪ ಅವರನ್ನು ಕಳೆದುಕೊಂಡು ದು:ಖಮಯವಾಗಿ ಅವರ ಪತ್ನಿ, ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿರುವಂತದ್ದು ಲಕ್ಕಪ್ಪ ಅವರು ಸಾಲದ ಬಾದೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದರಿAದ ತನಿಖೆಯ ಅವಶ್ಯಕತೆ ಇರುವುದಿಲ್ಲ, ಇವರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಿ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜೇರಿ ಹೇಳಿದರು.
ರಾಯಬಾಗ ತಾಲೂಕಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಮಾತನಾಡಿ ಲಕ್ಕಪ್ಪ ಅವರು ತಮ್ಮ ಹೊಲದಲ್ಲಿ 3-4 ಬೊರವೇಲ್‌ಗಳನ್ನು ಕೋರೆಯಿಸಿದರು ನೀರು ಬಾರದೆ ಇದ್ದಾಗ ಮತ್ತೊಂದು ಬೋರವೇಲ್ ಕೋರೆಸಿದರು ಅದಕ್ಕೂ ನೀರು ಬಾರದಿದ್ದಾಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಆತ್ಮಹತ್ಯೆ ಆಗಿರುವದರಿಂದ ಅಧಿಕಾರಿಗಳು ಕುಂಟು ನೆಪಹೇಳಿ ಪ್ರಕರಣ ವಿಳಂಬ ಮಾಡದದೆ ಮೃತ ಲಕ್ಕಪ್ಪನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು, ಶಾಸಕರು, ಸಂಸದರು ಇತ್ತಕಡೆ ಸ್ವಲ್ಪ ಗಮನಹರಿಸಿ ಈ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಗದ ಮುಖಂಡ ಚೂನಪ್ಪ ಪೂಜೇರಿ, ಬಾಗಲಕೋಟ ಜಿಲ್ಲಾ ರೈತ ಸಂಘದ ಮುಖಂಡ ಗಂಗಾಧÀರ ಮೇಟಿ, ರಾಯಬಾಗ ತಾಲೂಕಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ರಮೇಶ ಕಲ್ಲಾರ, ಪಿಡಿಓ ರಾಮನಗೌಡ ಪಾಟೀಲ್, ಜ್ಞಾನೇಶ ಅಳಗೋಡಿ, ಲಕ್ಷö್ಮಣ ಬ್ಯಾಳಿ, ತಮ್ಮಣ್ಣ ಪಾಟೀಲ, ಸಿದ್ರಾಮ ಅಳಗೋಡಿ, ಹೂವಪ್ಪ ಅಂಗಡಿ, ಲಕ್ಕಪ್ಪ ದೊಡ್ಡಮನಿ, ಮಹಾದೇವ ಡೊಮ್ಮಳಗೋಳ, ಲಕ್ಷö್ಮಣ ತುಕಾನಟ್ಟಿ, ಬಸಪ್ಪ ಭದ್ರಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ಬಾಕ್ಷಲೈನ್:
“ಮೃತರೈತ ಲಕ್ಕಪ್ಪನ ಮಕ್ಕಳಿಗೆ ಸರ್ಕಾರದಿಂದÀ ಉಚಿತ ಶಿಕ್ಷಣ ಒದಗಿಸಿಕೊಡಬೇಕು. ರೈತರ ಕಷ್ಟಗಳನ್ನು ಅರಿತ ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರು ಈ ಬಡಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ರೈತನ ಕುಟುಂಬಕ್ಕೆ ಶೀಘ್ರವಾಗಿ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯದ ರೈತ ಮುಖಂಡರು ಸೇರಿಕೊಂಡು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಹೋರಾಟ ಮಾಡಲಾಗುವದು”
ಚೂನಪ್ಪ ಪೂಜೇರಿ. ಮುಖಂಡರು ರಾಜ್ಯ ರೈತ ಸಂಘ.

” ಸುಲ್ತಾನಪೂರದ ಲಕ್ಕಪ್ಪ ತಮ್ಮ ಹೊಲದಲ್ಲಿ ಮೂರು ನಾಲ್ಕು ಬೊರವೆಲ್ ಹಾಕಿದರು ನೀರು ಬಾರದೆಯಿದ್ದಾಗ ಸಾಲದ ಬಾದೆಯಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ತನಿಖೆಯ ನೆಪ ಹಾಕುತ್ತಿದ್ದಾರೆ. ಈ ತನಿಖೆಗಳನ್ನು ಬಿಟ್ಟು ಮೊದಲು ಕುಟುಂಬಸ್ಥರಿಗೆ ಸೂಕ್ತಪರಿಹಾರ ಒದಗಿಸಬೇಕು”
ಮಲ್ಲಪ್ಪ ಅಂಗಡಿ. ಅಧ್ಯಕ್ಷರು ರಾಯಬಾಗ ತಾಲೂಕಾ ರೈತ ಸಂಘ.

“ನಮ್ಮ ಮನೆಯವರು ಸುಮಾರು ನಾಲ್ಕೆದು ಬೋರವೆಲ ಹಾಕಿದರು ನೀರು ಬರಲಿಲ್ಲ ಬೆಳೆಗೆ ಏನು ಮಾಡುವುದು.? ಮಾಡಿರುವ ಸಾಲ ಹೇಗೆ ತಿರಿಸುವುದೆಂದು ಮನನೊಂದಿದ್ದರು. ಅವರಿಗೆ ಯಾರಮೇಲು ದ್ವೇಷ, ಸಿಟ್ಟು, ಜಗಳ ಇರಲಿಲ್ಲ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಜೀವನ ಸಾಗಿಸಲು ಸರ್ಕಾರ ನಮಗೆ ಪರಿಹಾರ ನೀಡಬೇಕು”
ಕಸ್ತೂರಿ ದೊಡ್ಡಮನಿ ಮೃತ ರೈತ ಲಕ್ಕಪ್ಪನ ಪತ್ನಿ.
Share
WhatsApp
Follow by Email