ವಿಶೇಷ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕಾ ಟ್ರೇರ‍್ಸ್ ಅಶೋಶಿಯನ್ ವತಿಯಿಂದ ರಾಯಬಾಗ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ವಿಶೇಷ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕಾ ಟ್ರೇರ‍್ಸ್ ಅಶೋಶಿಯನ್ ವತಿಯಿಂದ ರಾಯಬಾಗ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ರಾಯಬಾಗ : ಕೊರೋನಾ ಮಹಾಮಾರಿ ರೋಗಾನುದಿಂದ ಸಂಪೂರ್ಣ ಲಾಕ್ ಡೌನವಾದ ಹಿನ್ನಲೆಯಲ್ಲಿ ತಿವ್ರ ತೊಂದರೆ ಅನುಭವಿಸುತ್ತಿರುವ ಟ್ರೇರ‍್ಸ್ ( ಸಿಂಪಿಗರು) ರವರಿಗೆ ವಿಶೇಷ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕಾ ಟ್ರೇರ‍್ಸ್ ಅಶೋಶಿಯನ್ ವತಿಯಿಂದ ರಾಯಬಾಗ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊರೋನಾ ಎಂಬ ಮಹಾಮಾರಿ ರೋಗಾನುದಿಂದ ಲಾಕಡೌನವಾಗಿ ದೇಶಾದ್ಯಂತ ದಿನನಿತ್ಯ ಕೂಲಿ ಮಾಡುವ ಗೌಂಡಿ, ದೊಬಿ, ಬಿಡಿಗೇರ, ಕಂಬಾರರು ಮತ್ತು ಟ್ರೇಲರಸ್(ಸಿಂಪಿಗರು) ಕಾರ್ಮಿಕರಿಗೆ ತಿವ್ರತೊಂದರೆಯಾಗಿದೆ. ದೇಶದಲ್ಲಿ ಸುಮಾರು ಶೇಕಡಾ 80ರಷ್ಟು ಅಸಂಘಟಿತ ಕೂಲಿ ಕಾರ್ಮಿಕರಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಐದು ಸಾವಿರ ರೂಪಾಯಿಗಳ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ ಆದರೆ ಟ್ರೇರ‍್ಸಗಳಿಗೆ ಯಾವುದೇ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಿರುವುದಿಲ್ಲಾ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳಲ್ಲಿ ಟ್ರೇರ‍್ಸ್ ಕೆಲಸ ಮಾಡುವ ನೊಂದಾಯಿತ ಟ್ರೇರ‍್ಸಗಳಿಗೆ ಹಾಗೂ ಕುಶಲಕರ್ಮಿ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರ್ಥಿಕ ಸಹಾಯ ಹಸ್ತ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾ ಟ್ರೇರ‍್ಸ ಅಶೋಶಿಯನ್ಸ್ ಅಧ್ಯಕ್ಷ ಸದಾಶಿವ ಜೋರಾಪೂರೆ, ಸದಾನಂದ ಹಳಿಂಗಳೆ, ಸುಭಾಷ ಕೋಳೆಕರ, ಸಿದ್ದಪ್ಪ ಶಿಂಗೆ, ಶಂಕರ ಬಾಣಸಿ, ಸುಲೋಚನಾ ಪೋಳ, ಗಾಯತ್ರಿ.ಬಿ. ಅಶೋಕ ಹೊಂಕಳೆ, ಇಮ್ತಿಯಾಜ ಅತ್ತಾರ ಉಪಸ್ಥಿತರಿದ್ದರು.
Share
WhatsApp
Follow by Email