ಸಂಘಗಳಿಂದ ಕಂತುಗಳನ್ನು ತುಂಬಲು ಒತ್ತಾಯ, ತಲೆ ಮೇಲೆ ಕೈ ಹೋತ್ತು ಕುಳಿತ ಗ್ರಾಹಕರು |ಪೈನಾನ್ಸ್ಗಳಿಂದ ತಿಂಗಳ ಕಂತು ತುಂಬಲು ಕಿರುಕುಳ ?

ಸಂಘಗಳಿಂದ ಕಂತುಗಳನ್ನು ತುಂಬಲು ಒತ್ತಾಯ, ತಲೆ ಮೇಲೆ ಕೈ ಹೋತ್ತು ಕುಳಿತ ಗ್ರಾಹಕರು |ಪೈನಾನ್ಸ್ಗಳಿಂದ ತಿಂಗಳ ಕಂತು ತುಂಬಲು ಕಿರುಕುಳ ?

ಮಕಬುಲ್ ಅ ಬನ್ನೇಟ್ಟಿ
ಕನ್ನಡ ಟುಡೆ ವಿಶೇಷ :

ಮುದ್ದೇಬಿಹಾಳ : ನಮ್ಮ ಮನಿ ಮಂದಿ ದುಡಕಿ ನಂಬಿ ಸಂಘ ಸಂಸ್ಥೆಗಳಲ್ಲಿ ಸಾಲ ಸೂಲಾ ಮಾಡಿ ಜೀವನಾ ಮಾಡಾಕತ್ತೀವ್ರೀ,ಈ ಸುಡಗಾಡದ ಜಡ್ಡ್ ಬಂದ್ ನಮ್ಮ ಬಾಳೆ ಬದುಕ ಎಲ್ಲಾ ಹಾಳಾಗಿ ಹೋತ್ರಿ, ಗೌರಮೇಂಟ್‌ನವರು ಲಾಕ್ಡೌನ್ ಮಾಡಿ ಮನಿಯ್ಯಾಗ ಕುಂದರಿ ಅಂದ್ರು, ಮತ್ತ್ ಸಾಲ ಮಾಡಿದ್ರ 3 ತಿಂಗಳ ನಿಮ್ಮ ಸಾಲ ಯಾರು ಕೇಳಾಕ ಬರಂಗಿಲ್ಲಾ ಅಂದ್ರು ನೀವು ಮನಿಯ್ಯಾಗ ಕುಂತ ಜೀವಾ ಉಳಿಸಿಕೊಳ್ರೀ ಅಂತಾ ಬೋದನಾ ಮಾಡಿದ್ರ ವಿನಹಃ ನಮ್ಮ ನೆರೆವಿಗೆ ಯಾರು ಬರಲಿಲ್ಲಾ,
ಇಂತಹ ಗತಿಯೊಳಗ ಬದುಕ ಮಾಡೋದ್ ಬ್ಯಾಸರಾಗೈತಿ ಅಂತದ್ದರಾಗ ವರ‍್ದ ಸಂಘದವರು, ತಿಂಗಳ ಸಂಘದವರು ಬಂದು, ನಮ್ಮ ರೊಕ್ಕ ಕಟ್ರೀ, ಎಂದು ಮನಸ್ಸಿಗೆ ಬ್ಯಾರ‍್ರ ಮಾಡಾಕತ್ಯಾರ್, ಮನಿಯ್ಯಾಗ ಕುಂದ್ರಿ ಅಂದವರು ಯಾವ ಸುಬೇದಾರನೂ ನಮ್ಮ ನೆರಿವಿಗಿ ಬರಂಗಿಲ್ಲರೀ, ನಮ್ಮ ಹೊಟ್ಟಿ ಕಡದ್ರ ನಾವ್ ಅಜವಾನ್ ತಿನ್ನಬೇಕ್ರೀ, ಯಾರರ್ ಅಜವಾನ್ ತಿಂದ್ರ ಕಡಿಮ್ಯಾಗತೈತೇನ್ರೀ ಸಾಹೇಬ್ರ..
ಹೌದು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ,ಬಡವರು ,ದಲಿತರು , ಶೋಷಿತರು, ಸ್ಲಂ ಜನರು ತಮ್ಮ ಬದುಕಿನ ಬಂಡಿಯನ್ನು ಸುಗಮವಾಗಿ ನಡೆಸುವ ಸಲುವಾಗಿ, ಅಥವಾ ಇನ್ನಾವದೂ ಸಾಲವನ್ನು ಮುಟ್ಟಿಸುವಗೊಸ್ಕರ, ವಾರದ ಸಂಘ, ತಿಂಗಳ ಸಂಘದಲ್ಲಿ ತಮಗೆ ಬೇಕಾದಷ್ಟು ಸಾಲವನ್ನು ತೆಗೆದುಕೊಂಡಿರುತ್ತಾರೆ. ಇದರಿಂದ ಅವರು ತಮ್ಮ ಕಾಯಕವನ್ನಾಗಲಿ , ಜೀವನವಾಗಲಿ ಸುಖಮಯವಾಗಿ ಸಾಗಿಸುತ್ತಿರುತ್ತಾರೆ. ಆದರೆ ಇಂದು ಕೊರೊನಾ ವೈರಸ್ ನಿಂದ ದೇಶವೆ ಲಾಕ್ಡೌನ್ ಆಗಿದ್ದರಿಂದ , ದಿನನಿತ್ಯ ದುಡಿದು ಬದುಕು ನಡೆಸುವರ ಬದುಕು ಚಿಂತಾಜನಕವಾದ ಸಂಧರ್ಭದಲ್ಲಿಯೇ ಸಾಲವನ್ನು ಕೊಟ್ಟ ಸಂಘಗಳು ಮರಳಿ ಸಾಲವನ್ನು ತುಂಬಿ ಎಂದು ಸಾಲವನ್ನು ತೆಗೆದುಕೊಂಡ ಗ್ರಾಹಕರಿಗೆ ದಿನಿತ್ಯ ಕಿರುಕುಳ ಕೊಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಆದರಿಂದ ಸಂಭAಧ ಪಟ್ಟಂತಹ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿನ ಸಾಲವನ್ನು ನೀಡಿರುವಂತಹ ಸಂಘಗಳಿಗೆ ತಾಕೀತು ಮಾಡುವ ಅವಶ್ಯಕತೆ ಇದೆ.
ಕಿರುಕುಳ ನೀಡುತ್ತಿರುವ ಸಂಘಗಳ ವಿರುದ್ದ ಪ್ರಕರಣ ದಾಖಲಿಸಿ.
ಗ್ರಾಮೀಣ ಭಾಗಗಳಲ್ಲಿ ವಾರದ, ಹಾಗೂ ತಿಂಗಳ ವಾಯಿದೆ ಪ್ರಕಾರ ಸಾಲವನ್ನು ನೀಡಿರುವಂತಹ ಸಂಘಗಳು ಗ್ರಾಹಕರಿಗೆ ಸಾಲವನ್ನು ಬೇಗನೆ ತುಂಬಿ ಎಂದು ಕಿರುಕುಳ ನೀಡುತ್ತಿದ್ದಾವೆ ಎನ್ನುವ ಆರೋಪಗಳು ಗ್ರಾಮೀಣ ಬಾಗಗಳಲ್ಲಿ ಕೇಳಿ ಬರುತ್ತಿವೆ. ದೇಶವೆ ಲಾಕ್ಡೌನ್ ಆಗಿರುವದರಿಂದ ದುಡಿದು ಬದುಕು ನಡೆಸುವರಿಗೆ ದುಡಿಮೆ ಇಲ್ಲವಾಗಿದೆ. ಮತ್ತು ದಿನನಿತ್ಯ ಸರಿಯಾಗಿ ಉಟದ ವ್ಯವಸ್ಥೆ ಇಲ್ಲದಂತಾಗಿದೆ. ಇಂತಹ ವ್ಯವಸ್ಥೆಯಲ್ಲಿ ಸಾಲವನ್ನು ನೀಡಿದ ಸಂಘಗಳು ಸಾಲವನ್ನು ತುಂಬಿ ಎಂದು ಕಿರುಕುಳ ನೀಡುತ್ತಿರುವದು ಎಷ್ಟು ಸರಿ ಎನ್ನುತ್ತಿದ್ದಾರೆ ಜನಸಾಮಾನ್ಯರು. ಆದರಿಂದ ಗ್ರಾಮೀಣ ಪ್ರದೇಶದಲ್ಲಿ ಸಾಲವನ್ನು ಪಡೆದುಕೊಂಡವರಿಗೆ ಕಿರುಕುಳ ನೀಡುತ್ತಿರುವ ಸಂಘಗಳ ವಿರುದ್ದ ತಾಲೂಕಾಡಳಿತ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಪ್ರಜ್ಞಾವಂತನಾಗರಿಕರು ತಾಲೂಕಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಕ್ರಮ ಏನು ?
ಲಾಕ್ಡೌನ್ ನಿಂದ ಕಂಗೆಟ್ಟಿರುವ ಜನಸಾಮಾನ್ಯರ ಬದುಕಿಗೆ ಸಾಲ ತುಂಬುವ ಹೊರೆ ಬರೆಯಂತೆ ಬಿದ್ದಿದೆ. ಸರಕಾರವೇನು 3 ತಿಂಗಳು ಯಾವದೇ ಸಾಲವನ್ನು ತುಂಬುವದನ್ನು ತಡೆಹಿಡಿಯಲಾಗಿದೆ ಎಂದು ಸಾರಿ ಸಾರಿ ಹೇಳಿತು. ಆದರೆ ತಾಲೂಕಿನಲ್ಲಿ ಲಾಕ್ಡೌನ್ ನಿಂದ ಸ್ವಲ್ಪ ಸಡಿಲಿಕೆ ಕಂಡ ತಕ್ಷಣ ಪೈನಾನ್ಸ್ ವಾರದ ಸಂಘ, ತಿಂಗಳ ಸಂಘದವರು ಸಾಲ ತೆಗೆದುಕೊಂಡವರಿಗೆ ತುಂಬುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಗ್ರಾಮೀಣ ಬಾಗದ ಜನರು ಮತ್ತು ಸಾಲ ಪಡೆದುಕೊಂಡವರು ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಕೊರೊನಾ ಹೊಡೆತದಿಂದ ಕೆಂಗೆಟ್ಟಿರುವ ಜನಸಾಮಾನ್ಯರಿಗೆ ಬದುಕಿಗೆ ಸಾಲ ತುಂಬುವದು ಬಾರಿ ಪೆಟ್ಟಾಗಿದೆ. ಆದರಿಂದ ಕಿರುಕುಳ ನೀಡುತ್ತಿರುವ ಪೈನಾನ್ಸ್, ಹಾಗು ಸಂಘದವರಿಗೆ ಸರಕಾರ ಎಚ್ಚರಿಕೆ ನೀಡುವದು ಒಳಿತು.

ಬಾಕ್ಸ್ ನ್ಯೂಸ್: ಈಗಾಗಲೇ ಕೊರೊನಾ ಹೊಡೆತದಿಂದ ಜನಸಾಮಾನ್ಯರ ಬದುಕು ಹದೆಗೆಟ್ಟಿದೆ. ಇಂತಹ ಸಂಧರ್ಭದಲ್ಲಿ ಸಾಲ ಮರಳಿ ತುಂಬುವಂತೆ ಸಾಲ ಕೊಟ್ಟಿರುವ ಸಂಘಗಳು , ಪೈನಾನ್ಸ್ ಗಳಿಗೆ ಸಂಬAಧ ಪಟ್ಟವರು ಎಚ್ಚರಿಕೆ ಕೊಟ್ಟು, ಜನಸಾಮಾನ್ಯರಿಗೆ ಆಸರೆಯಾಗಬೇಕಿದೆ. ಎಂದು ಲಕ್ಷö್ಮಣ ಬೇನಾಳ, ದಲಿತ ಯುವ ಮುಖಂಡ ಆಗ್ರಹಿಸಿದ್ದಾರೆ.

ಬಾಕ್ಸ್ ನ್ಯೂಸ್: ಈ ಜಡ್ಡ್ ಬಂದಾಗನಿಂದ ನಮ್ಮ ಹಳ್ಯಾಗ ಬದುಕದ ಕಷ್ಟ ಆಗೇತ್ರೀ, ಇಂತ ಸ್ಥೀತ್ಯಾಗ ದುಡಿಕಿ ಇಲ್ರೀ ಮನಿಯ್ಯಾಗ ಎಲ್ರು ಕುಂತ ತಿನ್ನಾಕತ್ಯಾರ, ಸಾಲ ಕೊಡು ಅಂತ ಕುಂತ್ರ ಯ್ಯಾಂಗ್ ಮಾಡೋದ್ರೀ, ಇನ್ನೂ ಸಲ್ಪ ದಿವಸ ಸಮಯ ಕೊಟ್ರ ನಮ್ಮ ಬೇಶ ಆಗತ್ರೀ ಸಾಹೇಬ್ರ. ಬಸಮ್ಮ ಬಿರಾದಾರ ಹೇಳಿದರು.
Share
WhatsApp
Follow by Email