ಸಾಂಸ್ಥಿಕ ಕ್ವಾರಂಟೇನಲ್ಲಿ ಹಸ್ತಕ್ಷೇಪವಿಲ್ಲ  ಸಮ್ಮನೆ ವಿನಾಕಾರಣ ಕೆಲ ಕಿಡಗೆಡಿಗಳು ನನ್ನನ್ನು ಗುರಿಯಾಗಿಟ್ಟುಕೊಂಡು ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿರುವದು ಸರಿಯಲ್ಲ :ಶಾಸಕ ಸಿದ್ದು ಸವದಿ

ಸಾಂಸ್ಥಿಕ ಕ್ವಾರಂಟೇನಲ್ಲಿ ಹಸ್ತಕ್ಷೇಪವಿಲ್ಲ ಸಮ್ಮನೆ ವಿನಾಕಾರಣ ಕೆಲ ಕಿಡಗೆಡಿಗಳು ನನ್ನನ್ನು ಗುರಿಯಾಗಿಟ್ಟುಕೊಂಡು ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿರುವದು ಸರಿಯಲ್ಲ :ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ : ಜಿಲ್ಲಾಡಳಿತದ ಆದೇಶದಂತೆ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಬೇರೆ ಬೇರೆ ರಾಜ್ಯಗಳಿಂದ ಬಂದ ಜನರನ್ನು ಕ್ವಾರಂಟೇನ ಮಾಡಲಾಗಿದ್ದು ಆದರೆ ಇದರಲ್ಲಿ ನನ್ನ ಕಾರ್ಯವ್ಯಖರಿಯು ಮತ್ತು ಹಸ್ತಕ್ಷೇಪವಿಲ್ಲ, ಸಮ್ಮನೆ ವಿನಾಕಾರಣ ಕೆಲ ಕಿಡಗೆಡಿಗಳು ನನ್ನನ್ನು ಗುರಿಯಾಗಿಟ್ಟುಕೊಂಡು ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿರುವದು ಸರಿಯಲ್ಲವೆಂದು ಶಾಸಕ ಸಿದ್ದು ಸವದಿ ಖಾರವಾಗಿ ಹೇಳಿದರು.
ಬೇರೆ ಬೇರೆ ರಾಜ್ಯಗಳಿಂದ ಬಂದ ಜನರನ್ನು ಲಕ್ಷಿö್ಮÃನಗರದ ಸರಕಾರಿ ಉರ್ದುಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೇನಲ್ಲಿರುವ ಲೋಪದೋಶಕ್ಕೆ ಉತ್ತರಿಸಿದ ಅವರು ವೈರಸ್ ತಡೆಯುವಲ್ಲಿ ಕ್ವಾರಂಟೇನ ಮುಖ್ಯ ಪಾತ್ರವಾಗಿದೆ. ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯಬೇಡ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹುಚ್ಚಾಟ ನಡೆಸಬಾರದು. ಎಲ್ಲರು ಸರ್ಕಾರ ಹೇಳಿದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕೆಂದು ಸಿದ್ದು ಸವದಿ ಹೇಳಿದರು.
ಜನರ ಬೇಡಿಕೆಯಂತೆ ಜಿಲ್ಲಾಧಿಕಾರಿ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ವ್ಯಾಪಾರ ವಹಿವಾಟು ಸಡಿಲಿಕೆ ಮಾಡಿದ್ದು ಅನುಕೂಲ ಮಾಡಿಕೊಡಲಾಗಿದೆ. ಸಾರ್ವಜನೀಕರು ಇದನ್ನು ಬೇಡವೆಂದರೆ ಮತ್ತೆ ಸಂಪೂರ್ಣ ಲಾಕ್‌ಡೌನ್ ಮಾಡಲು ನಾವು ಸಿದ್ದ ಎಂದು ಸಿದ್ದು ಸವದಿ ನೇರ ಸ್ಪಷ್ಟನೆ ನೀಡಿದರು.
Share
WhatsApp
Follow by Email