ಮಾಜಿ ಪ್ರದಾನಿ ದಿ ರಾಜೀವ್ ಗಾಂದಿಯ 29ನೇ ಪುಣ್ಯ ಸ್ಮೇರಣೆ ನಿಮಿತ್ಯವಾಗಿ ಬಡ ಕಾರ್ಮಿಕರಿಗೆ  ಆಹಾರ ದಾನ್ಯ ಕೀಟ್ ವಿತರಣೆ

ಮಾಜಿ ಪ್ರದಾನಿ ದಿ ರಾಜೀವ್ ಗಾಂದಿಯ 29ನೇ ಪುಣ್ಯ ಸ್ಮೇರಣೆ ನಿಮಿತ್ಯವಾಗಿ ಬಡ ಕಾರ್ಮಿಕರಿಗೆ ಆಹಾರ ದಾನ್ಯ ಕೀಟ್ ವಿತರಣೆ

ಮುದ್ದೇಬಿಹಾಳ : ದೇಶದಲ್ಲಿ 21ನೆ ಶತಮಾನದಲ್ಲಿ ಡಿಜಿಟಲ್ ಯಂತ್ರೋಪಕರಣಗಳಿಗೆ ಮತ್ತು ಯುವಕರಿಗೆ 18ವರ್ಷ ಮತದಾನದ ಹಕ್ಕನ್ನು ನೀಡಿ ಎಲ್ಲರೂ ಸಮಾನರು ಎಂಬ ಬಾವನೆಯೊಂದಿಗೆ ಬದುಕಬೇಕು ಎನ್ನುವ ಸಂದೇಶವನ್ನು ಈ ಜಗತ್ತಿಗೆ ತೋರಿಸಿ ಕೊಟ್ಟ ಏಕೈಕ ಪ್ರದಾನಿ ದಿ, ರಾಜೀವ್ ಗಾಂದಿ ಎಂದು ತಾಲೂಕಾ ಯುವ ಕಾಂಗ್ರೇಸ್ ಅದ್ಯಕ್ಷ ರಪೀಕ್ ಶಿರೋಳ ಹೇಳಿದ ಅವರು ಯಾವದೇ ಜಾತಿ ಧರ್ಮ ಎನ್ನದೇ ದೇಶದ ಹಿತಕ್ಕಗಿ ದುಡಿದು ತಮ್ಮ ಜನ್ಮವನ್ನೆ ದೇಶಕ್ಕಾಗಿ ಕೊಟ್ಟಿದ್ದಾರೆ ಅಂತಹ ಮಾಹಾನ್ ವ್ಯಕ್ತಿ ಇವರು ಎಂದರು.
ಇದೇ ವೇಳೆ ಮಾತನಾಡಿದ ಎನ್‌ಎಸ್‌ಯುಆಯ್ ಜಿಲ್ಲಾ ಅದ್ಯಕ್ಷ ಸದ್ದಾಂ ಕುಂಟೋಜಿ ದೇಶದಲ್ಲಿ ಕೋರೋನಾ ವೈರಸ್ ನಿಂದ ಎಲ್ಲಾ ಕ್ಷೇತ್ರಗಳು ದಿಕ್ಕೆಟ್ಟು ಹೊಗಿವೆ, ಮಾನ್ಯ ಪ್ರದಾನಿಯವರು ಮಾತ್ರ ಸರಿಯಾಗಿ ಯಾವದೇ ನಿರ್ದಾರವನ್ನು ತೆಗೆದುಕೊಳ್ಳುತ್ತಿಲ್ಲ, ಬರಿ ಬಾಷಣದಿಂದ ನಮ್ಮ ದೇಶ ಉದ್ದಾರ ಆಗುವದಿಲ್ಲಾ, ದಿ, ರಾಜೀವ್ ಗಾಂದಿವರAತೆ ದೇಶಕ್ಕಾಗಿ ಜಾತಿ ರಹಿತ ಸಮಾಜವನ್ನು ನಿರ್ಮಿಸಿ ದೇಶಕ್ಕಾಗಿ ಬದುಕಬೇಕು, ಕೊರೋನಾ ವೈರಸ್ ನಿಂದ ಇಂದು ಬಡಮಧ್ಯಮ ವರ್ಗದವರಿಗೆ ತಿನ್ನಲು ಅನ್ನ ಇರದೇ ಹಾಗೆ ಆಗಿದೆ ಇದನ್ನು ಮನಗಂಡು ನಾವು ನಮ್ಮ ಸಂಘಟನೆಯಿAದ ಬಡವರಿಗೆ ಆಹಾರ ಕೀಟ್ , ವಿತರಣೆ ಒಂದು ದಿನ ಕೂಲಿಯ ವೇತನವನ್ನು ನೀಡುತ್ತಿದೆ ಎಂದರು.ಇದೇ ಸಂಧರ್ಭದಲ್ಲಿ ಚಿನ್ನು ನಾಡಗೌಡ, ತಂಗಡಗಿ ಗ್ರಾಮ ಪಂಚಾಯತ್ ಅದ್ಯಕ್ಷ ಸಂಗಯ್ಯಾ ಸ್ಥಾರಂಗಮಠ,ಅಸ್ಪಾಕ ನಾಡಗೌಡ, ಅಮೀನಸಾ ಮುಲ್ಲಾ, ಬಾಪ್ ಡವಳಗಿ,ಮಾನಪ್ಪ ನಾಯಕ ಹರೀಶ ದೇವೂರ, ಪ್ರಶಾಂತ ರಾಠೋಡ,ಬಸವರಾಜ ಗೂಳಿ, ಪ್ರಶಾಂತ ತಾರನಾಳ, ಮಹಿಬೂಭ ಮಕಾಶಿ, ಸುರೇಶ ಮುದೂರ, ವಿರೂಪಾಕ್ಷೀ ಕತ್ತಿ, ಸಂತೋಷ ಮ್ಯಾಗೇರಿ, ಯೂನೂಸ್ ವಾಲಿಕಾರ, ಟಿಪ್ಪು ಮ್ಯಾಗೇರಿ, ಮತ್ತಿತರರು ಇದೆ ಸಂಧರ್ಭದಲ್ಲಿ ಇದ್ದರು
Share
WhatsApp
Follow by Email