
ಜಮಖಂಡಿ: ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮೇ 24 ರವಿವಾರದಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆ ಹಾಗೂ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ್ತು ಹಿದೆ ನಿಗಧಿಪಡಿಸಿದ ಮದುವೆ ಸಮಾರಂಭಗಳನ್ನು ನಡೆಸಲು ಅನುಮತಿಸಲಾಗಿದೆ ಎಂದು ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.
ಭಾನುವಾರ ಹಾಲು, ಹಣ್ಣು, ತರಕಾರಿ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮಳಿಗೆಗಳೂ ಹಾಗೂ ಅನಾವಶ್ಯಕ ಸಂಚಾರ ನಿಷೇಧಿಸಲಾಗಿದೆ.
ಈ ಹಿಂದೆ ನಿಗಧಿಪಡಿಸದಹಾಗೆ ಮದುವೆ ಸಮಾರಂಭವನ್ನು ಅತಿಥಿಗಳ ಸಂಖ್ಯೆ 50ಕ್ಕೂ ಮೀರದೆ ಸರಳತೆಯಿಂದ ಮದುವೆ ಸಮಾರಂಭಗಳನ್ನು ನಡೆಸಬೇಕು. ಬಾನುವಾರ ಹೆಚ್ಚುವರಿಯಾಗಿ ಬೆಳೆಗ್ಗೆ 7ರಿಂದ ಸಂಜೆ 7ರ ವರೆಗೆ ಸೆಕ್ಷನ್ 144 ಜಾರಿಯಲ್ಲಿರುವದರಿಂದ ಅವಶ್ಯಕವಲ್ಲದ ಚಟುವಟಿಕೆಯ ವ್ಯಕ್ತಿಗಳ ಸಂಚಾರ, ಆಟೋ, ಬಸ್ ಸಂಚಾರ, ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.