
ರಾಯಬಾಗ : ತಾಲೂಕಿನ ಭೆಂಡವಾಡ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಭೆಂಡವಾಡ ಮಾವಿನಹೊಂಡಾ, ಜೋಡಟ್ಟಿ, ನಿಪನಾಳ ಗ್ರಾಮಗಳಲ್ಲಿ ಹಾರೂಗೇರಿ ಪಟ್ಟಣದ ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಶನಿವಾರ ಮಹೇಶ ತಮ್ಮನ್ನವರ ಅವರು ಆಹಾರಧಾನ್ಯಗಳ ಕೀಟ್‌ಗಳನ್ನು ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಮಹೇಶ ತಮ್ಮನ್ನವರ ಅವರು ಮಾತನಾಡಿ ರಾಯಬಾಗ ತಾಲೂಕಿನಲ್ಲಿ ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಮೊದಲಿನಿಂದಲೂ ಕಷ್ಟಕಾಲದ ಸಮಯದಲ್ಲಿ ಸಹಾಯ ಸಹಕಾರ ಮಾಡುತ್ತಲೇ ಇದೆ ಈಗ ಕರೋನಾ ಲಾಕಡೌನ ಸಮಯದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಕೆಲಸ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಅವರಿಗೆ ಆಹಾರ ಧಾನ್ಯಗಳ ಕೀಟ್‌ಗಳನ್ನು ನೀಡಿದರು.
ಲಾಕಡೌನ್ ಸಮಯದಲ್ಲಿ ತೊಂದರೆಗಿಡಾದ ಬಡವರಿಗೆ, ನಿರ್ಗತಿಕರಿಗೆ ಹಾಗೂ ಕಾರ್ಮಿಕರಿಗೆ ಪ್ರತಿಷ್ಠಾನದ ವತಿಯಿಂದ ರಾಯಬಾಗ ಹಾಗೂ ಕುಡಚಿ ವಿಧಾನಸಭೆಯ ಕ್ಷೇತ್ರದ ಹಳ್ಳಿಗಳಲ್ಲಿ ಸಾವಿರಾರು ಆಹಾರ ಧಾನ್ಯಗಳ ಕೀಟ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟದ ಅಧ್ಯಕ್ಷೆ ತೇಜಸ್ವೀನಿ ನಾಯಿಕವಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗುಡೆ, ಮುಖಂಡರಾದ ಧೂಳಗೌಡ ಪಾಟೀಲ, ರಾಜು ತಳವಾರ, ರಾಜು ಶಿರಗಾಂವೆ, ಬಿ.ಎನ್.ಬಂಡಗಾರ, ದಿಲೀಪ ಜಮಾದರ,ಸಿದ್ರಾಮ ಪೂಜಾರಿ, ಬಸವರಾಜ ಪೂಜಾರಿ, ಚಂದ್ರ ಪಡತಾರೆ, ಅನೀಲ ಪಾಟೀಲ, ರಾಮಗೌಡ ಪಾಟೀಲ, ಬಸವರಾಜ ಬಬಲಿ ಸೇರಿದಂತೆ ಅನೇಕರು ಇದ್ದರು