ಅಥಣಿಯಲ್ಲಿ ರಮಜಾನ್ ಸರಳ ಆಚರಣೆ

ಅಥಣಿಯಲ್ಲಿ ರಮಜಾನ್ ಸರಳ ಆಚರಣೆ

ಅಥಣಿ: ಪಟ್ಟಣದಲ್ಲಿ ರಮಜಾನ್ ಹಬ್ಬದ ಅಂಗವಾಗಿ ಅಸ್ಲಮ್ ನಾಲಬಂದ್ ಇವರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್ ನಾಲಬಂದ್ ಮಾತನಾಡಿ ಜಗತ್ತು ಸಂಕಷ್ಟದಲ್ಲಿ ಇರುವ ಸಮಯದಲ್ಲಿ ನಾವು ಹಬ್ಬ ಆಚರಿಸುವದು ಸರಿ ಅಲ್ಲ.
ನಮ್ಮ ಧರ್ಮಗುರುಗಳು ಕೂಡ ಪವಿತ್ರ ರಮಜಾನ್ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಕರೆ ನೀಡಿದ್ದರಲ್ಲದೆ ಲಾಕ್ ಡೌನ್ ನಿಂದಾಗಿ ನೊಂದ ಬಡವರು, ಕಾರ್ಮಿಕರಿಗೆ ಹಬ್ಬಕ್ಕೆ ಮಾಡುವ ಖರ್ಚಿನಲ್ಲಿ ವೆಚ್ಚದಲ್ಲಿ ಸಹಾಯ ಮಾಡಲು ಸೂಚಿಸಿದ್ದರು ಅವರ ಮಾತು ಪಾಲಿಸಿ ಸಹೋದರತೆ ಮೆರೆಯುವ ಪ್ರಯತ್ನವನ್ನು ಪ್ರತಿ ಮುಸಲ್ಮಾನ ಭಾಂಧವರು ಸರಳವಾಗಿ ಹಬ್ಬ ಆಚರಿಸಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕೊರೊನಾ ಲಾಕ್ ಡೌನ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜ ತಮ್ಮ ಧಾರ್ಮಿಕ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದು ಕೊರೊನಾ ಹರಡದಂತೆ ತಡೆಯುವದಕ್ಕಾಗಿ ಸಾಮೂಹಿಕ ಪ್ರಾರ್ಥನೆ ಕೈ ಬಿಟ್ಟು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾನೂನು ಪಾಲಿಸಿದ್ದು ಶ್ಲಾಘನೀಯ ಎಂದರು.
ಈ ವೇಳೆ ಮಾಜಿ ಪುರಸಭೆ ಸದಸ್ಯ ಸಲಾಮ್ ಕಲ್ಲಿ, ಅನೀಲ ಸೂನದೊಳಿ, ಸುನೀಲ ಸಂಕ, ಮುಸ್ಲಿಂ ಸಮಾಜದ ಮುಖಂಡರಾದ ಮುಬಾರಕ್ ನಾಲಬಂದ್, ಯಾಸಿನ್ ಝಾರೆ, ಜುಬೇರ್ ನಾಲಬಂದ್, ಹಾರೂನ್ ಮೋಮಿನ, ಲುಕಮಾನ್ ನಾಲಬಂದ, ಜಾವೀದ್ ಹುಲಗಬಾಳಿ, ಮೋದಿನ ಮಣಿಯಾರ್, ಸಿರಾಜ್ ಸನದಿ,ಮಂಜು ಹೊಳಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
Share
WhatsApp
Follow by Email