ಮುಗಳಖೋಡ: ಭಾರತೀಯ ಜನತಾ ಪಕ್ಷ ಚಿಕ್ಕೋಡಿ ಜಿಲ್ಲೆಯ ಕುಡಚಿ ಮಂಡಲ ಪಕ್ಷದ ಕಾರ್ಯವನ್ನು ಮುನ್ನಡೆಸಲು ಹಾಗೂ ಪಕ್ಷ ಸಂಘಟನೆಯನ್ನು ವಿಸ್ತರಿಸುವುದಕ್ಕಾಗಿ ಪಕ್ಷದ ಸೂಚನೆಯ ಮೇರೆಗೆ ಮುಗಳಖೋಡ ಪಟ್ಟಣದ ಇಂ. ಭರಮು ಭೀ. ತೇಲಿ ಅವರನ್ನು ಕುಡಚಿ ಮಂಡಲ ಸಾಮಾಜಿಕ ಜಾಲತಾಣಗಳ ಹಾಗೂ ಮಾಹಿತಿ ತಂತ್ರಜ್ಞಾನ ಸಂಚಾಲಕರನ್ನಾಗಿ ನಿಯುಕ್ತಿಗೊಳಿಸಿ ಜಿಲ್ಲಾಧ್ಯಕ್ಷ ಡಾ|| ರಾಜೇಶ್ ನೇರ್ಲಿ ಸೋಮವಾರ ಆದೇಶ ಹೊರಡಿಸಿದ್ದಾರೆ.