ಶಾಸಕರಾದ ಶ್ರೀ ಸಿದ್ದು ಸವದಿಯವರಿಂದ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿ ಕಿಟ್

ಶಾಸಕರಾದ ಶ್ರೀ ಸಿದ್ದು ಸವದಿಯವರಿಂದ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿ ಕಿಟ್

ರಬಕವಿ-ಬನಹಟ್ಟಿ : ಕೋವಿಡ 19 ನಿಂದ ಕಡುಬಡಕುಟುಂಬಗಳು ಹಸಿವಿನಿಂದ ಬಳಲುತ್ತಿದ್ದಿನ್ನು ತಿಳಿದು ತೇರದಾಳ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿಯವರು, ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ, ಸಂಸದರಾದ ಪಿ.ಸಿ. ಗದ್ದಿಗೌಡರ, ಜಿಲ್ಲಾ ಉಪಾಧ್ಯಕ್ಷರಾದ ರಾಜು ಅಂಬಲಿ ಮತ್ತು ಎಲ್ಲ ಹಿರಿಯರ ಸಮ್ಮುಕದಲ್ಲಿ ಬಡಕುಟುಂಬಗಳಿಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ದಿನಸಿ ಸಾಮಾಗ್ರಿ ಕಿಟ್ ವಿತರಿಸಲು ಚಾಲನೆ ನೀಡಿದರು.
ಹದಿನೈದು ದಿನಗಳಿಂದ ಪ್ರತಿನಿತ್ಯ ಹಗಲಿರುಳೆನ್ನದೆ ಎಲ್ಲ ಕಾರ್ಯಕರ್ತರು ಸೇರಿ ದಿನಸಿ ಸಾಮಾಗ್ರಿ ಕಿಟ್‌ಗಳನ್ನು ತಯಾರಿಸುವಲ್ಲಿ ನಿರತರಾಗಿದ್ದರು ಎಂದುಹೇಳಿ ಸಿದ್ದು ಸವದಿ ಅವರು ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದರು.
Share
WhatsApp
Follow by Email