ಬ್ರೇಕಿಂಗ್ ನ್ಯೂಸ್ ಅಥಣಿ: ಮೂವತ್ತೈದು ಜನರ ಕ್ವಾರಂಟೈನ್ ಮುಕ್ತಾಯ 29/05/202029/05/2020 admin ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದವರನ್ನು ತಾಲ್ಲೂಕು ಆಡಳಿತ ಇಂದು ಬಿಡುಗಡೆ ಮಾಡಿದೆ. ಅಥಣಿ ತಾಲೂಕಿನ ನಂದಗಾಂವ, ಜುಂಝರವಾಡ, ಸವದಿ ಗ್ರಾಮಗಳಲ್ಲಿ 12 ಜನ ಪಾಜಿಟಿವ್ ಬಂದ ಬೆನ್ನಲ್ಲೆ ತಾಲ್ಲೂಕು ಆಡಳಿತ ವೈಫಲ್ಯ ಕುರಿತು ಸಾರ್ವಜನಿಕ ಚರ್ಚೆ ನಡೆದಿತ್ತು ಕಳೆದ ಎರಡು ದಿನಗಳಿಂದ ಅಥಣಿ ತಾಲ್ಲೂಕಿನ ಜನರು ಕೊರೊನಾ ಹರಡುವ ಭಯದಿಂದ ತತ್ತರಿಸಿದ್ದರು. ಈ ಬೆನ್ನಲ್ಲೆ ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಶೈಲಜಾ ತಮ್ಮನ್ನವರ ನಾಲ್ಕು ಗ್ರಾಮಗಳಲ್ಲಿ ಸಂಚರಿಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮತ್ತು ಪ್ರಾಥಮಿಕ ಸಂಪರ್ಕಿತರ ಮಾಹಿತಿ ಕಲೆ ಹಾಕಿದ್ದರು. ಈಗ ಸರ್ಕಾರದ ಸುತ್ತೋಲೆ ಬದಲಾದ ಬಳಿಕ ಏಳು ದಿನಗಳ ಕ್ವಾರಂಟೈನ್ ಪೂರೈಸಿದವರನ್ನು ಕೂಡ ಬಿಡುಗಡೆ ಮಾಡಲಾಗುತ್ತಿದ್ದು ಕಳೆದ ಹದಿನಾಲ್ಕು ದಿನಗಳಿಂದ ಅಥಣಿ ಪಟ್ಟಣದ ಹೊರವಲಯದಲ್ಲಿ ಕ್ವಾರಂಟೈನ್ ಇದ್ದ ಹರಿಯಾಣ ರಾಜ್ಯದ ನೂರ್ ಜಿಲ್ಲೆಯಿಂದ ನಿಪ್ಪಾಣಿಯ ಕೊಗನೊಳ್ಳಿ ಚೆಕ್ ಪೊಸ್ಟಗೆ ಆಗಮಿಸಿದ್ದಮೂವತ್ತೈದು ಜನರನ್ನು ವೈದ್ಯಕೀಯ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸದ್ಯ ತಾಲ್ಲೂಕು ಆಡಳಿತ ಬಿಡುಗಡೆ ಮಾಡಿದೆ.ಈ ಬಗ್ಗೆ ಮಾತನಾಡಿದ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತಿ, ಪೋಲಿಸ್ ಇಲಾಖೆ, ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಯಶಸ್ವಿ ಕ್ವಾರಂಟೈನ್ ಅವಧಿ ಪೂರೈಸಿದ ಮೂವತ್ತೈದು ಜನರನ್ನು ವೈದ್ಯಕೀಯ ಇಲಾಖೆಯ ವರದಿ ಆಧರಿಸಿ ಅವರ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ. ಅವರ ಮನೆಯಲ್ಲಿ ಮುಂದಿನ ಏಳು ದಿನಗಳ ಕಾಲ ಅವರು ಕ್ವಾರಂಟೈನ್ ಉಳಿಯಲಿದ್ದಾರೆ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವದರಿಂದ ಗ್ರಾಮಸ್ಥರು ಭಯಪಡುವ ಅಗತ್ಯ ಇಲ್ಲ ಎಂದರು.ಇನ್ನೂ ಕ್ವಾರಂಟೈನ್ ಅವಧಿ ಪೂರೈಸಿದ ಕಿರಣಗಿ ಗ್ರಾಮದ ದಾವಲ್ ಉಸ್ಮಾನ ಮುಲ್ಲಾ ಕಳೆದ ಮೇ 16 ರಂದು ಕೊಗನೊಳ್ಳಿ ಚೆಕ್ ಪೋಸ್ಟ್ ತಲುಪಿದ ನಮ್ಮನ್ನು ಅಥಣಿ ಪಟ್ಟಣದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಈ ಅವಧಿಯಲ್ಲಿಆರೋಗ್ಯ ಇಲಾಖೆಯ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಪೋಲಿಸ್ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಂಡರು ದೇವರ ದಯೆಯಿಂದ ಸದ್ಯ ನಮ್ಮ ವರದಿ ನೆಗೆಟಿವ್ ಬಂದಿದ್ದು ನಮ್ಮನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದರು.ಈ ವೇಳೆ ಅಥಣಿ ಪಿಎಸ್ಐ ಕುಮಾರ ಹಾಡಕರ, ಅಥಣಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಬಂಗಾರಪ್ಪನವರ, ಶಿರಸ್ತೆದಾರ ಎಮ್ ವಿ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಎಸ್ ಯಾದವಾಡ, ಕಂದಾಯ ನಿರೀಕ್ಷಕ ತಮ್ಮಣ್ಣ ಕಲಾಟೆ, ಗ್ರಾಮಲೆಕ್ಕಾಧಿಕಾರಿ ಎಮ್ ಎಮ್ ಮಿರ್ಜಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. Share