ಕೊರೋನಾ : ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸನ್ಮಾನ

ಕೊರೋನಾ : ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸನ್ಮಾನ


ಮೂಡಲಗಿ : ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶ ಲಾಕ್ ಡೌನ ಆದ ಸಂಧರ್ಭದಲ್ಲಿ ಕರ್ತವ್ಯ ಪಾಲನೆ ಮಾಡಿದ ಮೂಡಲಗಿ ಸಮೀಪದ ಹಳ್ಳೂರ ಗ್ರಾಮದ ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಸ್ಥಳೀಯ ಮಹಾವೀರ ಕೋ-ಆಪ್ ಕ್ರೆಡಿಟ್ ಸೊಸೈಟಿಯಿಂದ 4 ಜನ ಆಶಾ ಕಾರ್ಯಕರ್ತರಿಗೆ ಸಹಾಯಧನ ನೀಡಲಾಯಿತು.

ಆಶಾ ಕಾರ್ಯಕರ್ತರು ತಮ್ಮ ಜೀವನ ಸಾಗಿಸಲು ಕಷ್ಟವಾಗುತ್ತಿದ್ದರೂ ಮಳೆ, ಗಾಳಿ, ಬಿಸಿಲು ಎನ್ನದೆ ತುರ್ತು ಸಂಧರ್ಭದಲ್ಲಿ ಕೆಲಸ ನೀರ್ವಹಿಸಿದ್ದು ಶ್ಲಾಘನೀಯ ಆದ್ದರಿಂದ ಕೊರೊನಾ ವಾರಿಯರ್ಸಗೆ ಸಹಕಾರಿ ಸಂಘಗಳಿಂದ ಸಲಾಂ ಎಂದು ಸೊಸೈಟಿಯ ಅಧ್ಯಕ್ಷ ಮಲ್ಲಪ್ಪ ಛಬ್ಬಿ ಹೇಳಿದರು

ಆಶಾ ಕಾರ್ಯಕರ್ತರಿಗೆ ಸರ್ಕಾರದ ನಿರ್ದೇಶನದ ಮೆರೆಗೆ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂಬಂಧಲ್ಲಿ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಲಕ್ಕಪ್ಪ ಸಪ್ತಸಾಗರ, ಶಂಕರ್ ಛಬ್ಬಿ, ಹಣಮಂತ ಸಪ್ತಸಾಗರ್, ಭರಮಪ್ಪ ಸಪ್ತಸಾಗರ, ಅಶೋಕ ಅಳಗೋಡಿ, ಲಕ್ಷ್ಮಣ ರೊಡ್ಡಣ್ಣವರ, ನಾಗಪ್ಪ ಮಳ್ಳಪ್ಪನವರ, ಭಜರಂಗ ಶೇರಖಾನೆ, ಶಾಲಿನಿ ತೇರದಾಳ, ಪದಮವ್ವ ಛಬ್ಬಿ, ಹಾಗೂ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು
Share
WhatsApp
Follow by Email