ಮೂಡಲಗಿ: ರೈತರಿಗೆ ಕೀಟ ನಿರ್ವಹಣೆಗೆ ಆನ್‌ಲೈನ್ ತರಬೇತಿ ಇಂದು

ಮೂಡಲಗಿ: ರೈತರಿಗೆ ಕೀಟ ನಿರ್ವಹಣೆಗೆ ಆನ್‌ಲೈನ್ ತರಬೇತಿ ಇಂದು



ಮೂಡಲಗಿ: ಅರಭಾವಿಯ ಜಿಲ್ಲಾ ಕೃಷಿ ಕೇಂದ್ರದಿoದ ಜೂ.1ರಂದು ಆನ್‌ಲೈನ್‌ದಲ್ಲಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಿರುವರು.
ಸೋಮವಾರ ಬೆಳಿಗ್ಗೆ 11ಕ್ಕೆ ‘ಮುಂಗಾರು ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಹಾಗೂ ಮಿಡತೆಗಳ ನಿರ್ವಹಣೆಯ ಕ್ರಮಗಳು’ ಕುರಿತು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಕೀಟಶಾಸ್ತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಮನಗೌಡ ಎಚ್. ಉಪನ್ಯಾಸ ನೀಡುವರು.

ಮಧ್ಯಾಹ್ನ 12ಕ್ಕೆ ‘ಮುಂಗಾರು ಬೆಳೆಗಳಲ್ಲಿ ಬೀಜೋಪಚಾರ ಹಾಗೂ ಅದರ ಮಹತ್ವ’ ಕುರಿತು ಅರಬಾವಿಯ ತೋಟಗಾರಿಕೆ ಮಹಾವಿದ್ಯಾಲಯದ ಬೀಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಿಲೀಪ ಮಸೂತಿ ಉಪನ್ಯಾಸ ನೀಡುವರು.

ಆಲ್‌ಲೈನ್‌ದಲ್ಲಿ ಭಾಗವಹಿಸಲು ಜೂಮ್ ವೆಬ್‌ವನ್ನು ಡೌನ್‌ಮಾಡಿಕೊಳ್ಳಬೇಕು ಮತ್ತು ಇಲಾಖೆಯ ಸಂಪರ್ಕದಲ್ಲಿರುವ ರೈತರಿಗೆ ಆನ್‌ಲೈನ್‌ದ ಸಂಪರ್ಕವನ್ನು ಕಲ್ಪಿಸಿಕೊಡಲಾಗುವುದು, ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಜಿಲಾನಿ ಮೋಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಮೊ.8147276159 ಸಂಪರ್ಕಿಸಲು ತಿಳಿಸಿದ್ದಾರೆ
Share
WhatsApp
Follow by Email