ಬ್ರೇಕಿಂಗ್ ನ್ಯೂಸ್ ಸವದತ್ತಿ :ಸುಗ್ರೀವಾಜ್ಞೆ ವಾಪಸ್ ಪಡೆಯಲು ಮನವಿ 31/05/202031/05/20201 min read admin ಸವದತ್ತಿ : ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತಂದು, ರೈತ ವಿರೋಧಿ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಮಾಡಲು ಹೊರಟಿರುವದನ್ನು ಖಂಡಿಸಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಗ್ರೇಡ್-೨ ತಹಶೀಲ್ದಾರ ಎಂ.ಎನ್. ಮಠದ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಎಲ್.ಎಸ್. ನಾಯಕ, ಬಸವರಾಜ ಕಪ್ಪಣ್ಣವರ, ಶಂಕರೆಪ್ಪ ತೊರಗಲ್ಲ, ಶ್ರೀಕಾಂತ ಹಟ್ಟಿಹೊಳಿ, ನೀಲಪ್ಪ ಅಣ್ಣಿಗೇರಿ, ನಾಗಪ್ಪ ಪ್ರಭುನವರ ಹಾಗೂ ಇತರರು ಇದ್ದರು Share